ನಾಪೋಕ್ಲು, ಮಾ. ೧೦: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡ ಲಾಗುವ ಉತ್ತಮ ಅಂಗನವಾಡಿ ಕಾರ್ಯ ಕರ್ತೆ ಪ್ರಶಸ್ತಿ ಯನ್ನು ನಾಪೋಕ್ಲು ಪಂಚಾಯಿತಿ ಯ ಹಳೆ ತಾಲೋಕು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಿ.ಜೆ ಭಾಗ್ಯವತಿ ಪಡೆದುಕೊಂಡಿದ್ದಾರೆ. ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಗೆ ಸರ್ಕಾರ ನೀಡುವ ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸಲು ತೆಗೆದುಕೊಂಡಿರುವ ಕ್ರಮ ಹಾಗೂ ಉತ್ತಮ ಚಟುವಟಿಕೆಗಳನ್ನು ಗುರುತಿಸಿ ಇವರ ಉತ್ತಮ ಸೇವೆಗಾಗಿ ಕೊಡಗು ಜಿಲ್ಲೆಯಿಂದ ಇವರನ್ನು ಆಯ್ಕೆ ಮಾಡಿರುವುದರಿಂದ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷಿö್ಮ ಆರ್. ಹೆಬ್ಬಾಳ್ಕರ್ ಈ ಪ್ರಶಸ್ತಿಯನ್ನು ವಿತರಿಸಿದರು.