ಸೋಮವಾರಪೇಟೆ, ಮಾ. ೧೧: ಹಾಸನ ದಿ ಪ್ಲಾಂರ‍್ಸ್ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ರುಗಳಾಗಿ ಸೋಮವಾರ ಪೇಟೆ ತಾಲೂಕಿನ ನಗರಳ್ಳಿ ಗ್ರಾಮದ ಎನ್.ಬಿ. ಗಣಪತಿ, ದೊಡ್ಡತೋಳೂರು ಗ್ರಾಮದ ಬಿ.ಈ. ಬೋಪಯ್ಯ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ. ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗುತ್ತದೆ. ಕೊಡಗು ಜಿಲ್ಲೆಯಿಂದ ಇಬ್ಬರೂ ಅವಿರೋಧ ಆಯ್ಕೆಯಾಗಿದ್ದಾರೆ.