ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಮಾ. ೧೦: ಕೊಡಗು ಮೂಲದ ಪ್ರತಿಭಾವಂತ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಸಾಧನೆಯ ಮೂಲಕ ಭಾರತ ಚಿತ್ರರಂಗದಲ್ಲೇ ನಂಬರ್ ಒನ್ ನಟಿಯಾಗಿದ್ದಾರೆ. ಆ ಸಾಧನೆೆ ಏನು ಗೊತ್ತೇ ? ರಶ್ಮಿಕಾ ಅವರು ನಟಿಸಿದ ಸತತ ಮೂರು ಚಿತ್ರಗಳೂ ಪುಷ್ಪಾ ೨, ಅವಿಮಲ್ ಮತ್ತು ಛಾಬ ಬಾಕ್ಸ್ ಆಫೀಸ್ ನಲ್ಲಿ ತಲಾ ೫೦೦ ಕೋಟಿ ಮೀರಿ ಕಲೆಕ್ಷನ್ ಮಾಡಿವೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಛಾವ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿದು ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ೫೦೦ ಕೋಟಿ ರೂ. ಗಳಿಸಿದ ಎಂಟನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಶ್ಮಿಕಾ ಈಗ ಸತತ ಮೂರು ಚಿತ್ರಗಳು ೫೦೦ ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ನಟಿಯಾಗಿದ್ದಾರೆ. ಛಾವ ಚಿತ್ರ ಹಿಂದಿಯಲ್ಲಿ ೫೧೬ ಕೋಟಿ ರೂ.ಗಳಿಗೂ ಹೆಚ್ಚು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಯ ಕಲೆಕ್ಷನ್ ಸೇರಿದಂತೆ ಭಾರತದಾದ್ಯಂತ ಒಟ್ಟು ೫೨೨ ಕೋಟಿ ರೂ.ಗಳಿಸಿದೆ. ಛಾವಾ ಚಿತ್ರಕ್ಕೂ ಮೊದಲು, ರಶ್ಮಿಕಾ ಪುಷ್ಪ ೨: ದಿ ರೂಲ್ ಚಿತ್ರದಲ್ಲಿ ನಟಿಸಿದ್ದರು, ಇದು ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ತೆಲುಗು ಆ್ಯಕ್ಷನ್ ಚಿತ್ರವಾಯಿತು, ಅದರ ಹಿಂದಿ ಆವೃತ್ತಿ ಮಾತ್ರ ೮೩೦ ಕೋಟಿ ರೂ.ಗಳಿಸಿತು.

ಇದೀಗ ಅತ್ಯಂತ ಜನಪ್ರಿಯವಾಗಿ ಮುನ್ನುಗ್ಗುತ್ತಿರುವ ಛಾವ ಸಿನೆಮಾ ಈಗಾಗಲೇ ೫೩೦ ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿದ್ದು ಮತ್ತಷ್ಟು ಯಶಸ್ಸಿನತ್ತ ಮುನ್ನುಗ್ಗುತ್ತಿದೆ, ಭಾರತದ ಹಿಂದಿ, ತಮಿಳು , ತೆಲುಗು ಮತ್ತು ಮಲೆಯಾಳಂ ನ ಯಾವುದೇ ಕಾಲದ ಯಾರೇ ಜನಪ್ರಿಯ ನಟಿಯ ಸತತ ಮೂರೂ ಚಿತ್ರಗಳೂ ಬಾಕ್ಸ್ ಆಫೀಸ್ ನಲ್ಲಿ ಈ ರೀತಿಯ ಗಳಿಕೆ ಮಾಡಿದ ಉದಾಹರಣೆ ಇಲ್ಲ .

ದಕ್ಷಿಣ ಭಾರತದಲ್ಲಿ ಮತ್ತು ಬಾಲಿವುಡ್ನಲ್ಲಿ ರಶ್ಮಿಕಾ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿ ದ್ದಾರೆ. ಈಗಂತೂ ಅವರು ಬಾಲಿವುಡ್ ಸಿನಿಮಾ ಗಳಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಕನ್ನಡ ಚಿತ್ರರಂಗದಿAದ ಶುರುವಾದ ಅವರ ಸಿನಿಜರ್ನಿ ಈಗ ಯಶಸ್ಸಿನ ಉತ್ತುಂಗ ತಲುಪಿದೆ. ಬೇರೆ ಯಾವುದೇ ನಟಿಯರು ಮಾಡಿರದ ಸಾಧನೆಯನ್ನು ರಶ್ಮಿಕಾ ಮಂದಣ್ಣ ಮಾಡಿದ್ದಾರೆ.

ಈತನ್ಮಧ್ಯೆ, ರಶ್ಮಿಕಾ ಈ ಹಿಂದೆ ೨೦೨೩ ರ ಚಲನಚಿತ್ರ ಅನಿಮಲ್‌ನಲ್ಲಿ

(ಮೊದಲ ಪುಟದಿಂದ) ರಣಬೀರ್ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದರು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಎ-ರೇಟಿಂಗ್ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು, ಹಿಂದಿಯಲ್ಲಿ ಸುಮಾರು ೫೦೫ ಕೋಟಿ ರೂ. ಮತ್ತು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಗಳು ಸೇರಿದಂತೆ ಭಾರತದಾದ್ಯಂತ ೫೫೬ ಕೋಟಿ ರೂ. ಗಳಿಸಿತು.

ಶಾರುಖ್ ಖಾನ್ ಜೊತೆಗೆ ಪಠಾಣ್ ಮತ್ತು ಜವಾನ್ ಎಂಬ ಎರಡು ರೂ. ೫೦೦ ಕೋಟಿ ಚಿತ್ರಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದ್ದ ದೀಪಿಕಾ ಪಡುಕೋಣೆ ಅವರನ್ನು ರಶ್ಮಿಕಾ ಈಗ ಹಿಂದಿಕ್ಕಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ ಚಿತ್ರ ಸಿಕಂದರ್‌ನೊAದಿಗೆ ಹೆಚ್ಚಿನ ದಾಖಲೆಗಳನ್ನು ಮುರಿಯಬಹುದು. ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಸಲ್ಮಾನ್ ಖಾನ್, ಕಾಜಲ್ ಅಗರ್‌ವಾಲ್, ಸತ್ಯರಾಜ್, ಶರ್ಮಾನ್ ಜೋಶಿ ಮತ್ತು ಪ್ರತೀಕ್ ಬಬ್ಬರ್ ಅವರೊಂದಿಗೆ ನಟಿಸಲಿದ್ದಾರೆ. ಅಲ್ಲದೆ ಥಾಮಾ, ಕುಬೇರ, ದಿ ಗರ್ಲ್ಫ್ರೆಂಡ್ ಮತ್ತು ಪುಷ್ಪ ೩, ದಿ ರಾಂಪೇಜ್ ಚಿತ್ರಗಳಲ್ಲಿಯೂ ನಟಿಸಲಿದ್ದಾರೆ.

ಈಗ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಸಿನಿಮಾದಲ್ಲಿ ನಟಿಸುತಿದ್ದು . ಆ ಚಿತ್ರ ಕೂಡ ಸೂಪರ್ ಹಿಟ್ ಆದರೆ ರಶ್ಮಿಕಾ ಅವರನ್ನು ಹಿಂದಿಕ್ಕುವವರೇ ಇರುವುದಿಲ್ಲ. ಅನೇಕ ಹೀರೋಗಳ ಪಾಲಿಗೆ ಅವರು ಲಕ್ಕಿ ಹೀರೋಯಿನ್ ಆಗಿದ್ದಾರೆ. ರಶ್ಮಿಕಾ ಅವರ ಅದೃಷ್ಟದಿಂದಲೇ ಈ ಪರಿ ಗೆಲುವು ಸಿಗುತ್ತಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ‘ಇದು ಅವರ ಪ್ರತಿಭೆಗೆ ಸಿಕ್ಕ ಫಲ’ ಎಂದು ಹೇಳುತ್ತಿದ್ದಾರೆ.