ಸುಂಟಿಕೊಪ್ಪ, ಮಾ. ೧೧: ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ವಿ.ಎಂ. ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್, ಆಯ್ಕೆಯಾಗಿದ್ದಾರೆ.
ಕೊಡವ ಸಮಾಜದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಫೈರೋಜ್, ನೌಶದ್ ಮತ್ತು ಪ್ರಶಾಂತ್ ಹಾಗೂ ಸಂತೋಷ್ ಕೆ. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ.ಸಚಿನ್, ಖಜಾಂಚಿಯಾಗಿ ಬಿ. ಎಲ್. ವಿಶ್ವನಾಥ್, ಸಹ ಕಾರ್ಯದರ್ಶಿಯಾಗಿ ಸಿಕ್ಕಂದರ್ ಶರೀಫ್, ಸಹ ಖಜಾಂಚಿ ಹರೀಶ್ ಯು., ಗೌರವಾಧ್ಯಕ್ಷರುಗಳಾಗಿ ಎಸ್.ವಿ. ಫರೀದ್, ಶರೀಫ್, ಮತ್ತು ಫೆಲಿಕ್ಸ್ ಡಿಸೋಜ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರವೀದ್, ಕೇಶವ, ರಂಜೀತ್ ಬಿ.ಕೆ., ಪ್ರಕಾಶ್, ಶಂಶುದ್ದೀನ್, ಕನೀಶ್ ಬಾಬು ಮತ್ತು ವಿನು ಸಲಹೆಗಾರರಾಗಿ ಸುನಿಲ್ ಸಿ.ಸಿ., ಇಸ್ಮಾಯಿಲ್, ಪ್ರಶಾಂತ್ (ಕೊಕಾ), ಪ್ರಜ್ವಲ್, ಮೂಸ, ಅಕ್ಬರ್ ಭಾಷ, ನಿರ್ದೇಶಕರುಗಳಾಗಿ ಟಿ.ಕೆ. ಪ್ರಕಾಶ್, ವಿನು, ಚೇತನ್, ಮೊಯ್ದು, ನವೀನ್ ಶಿವಪ್ಪ, ಶಾದಿಕ್ ಭಾಷ, ಅಜೀಜ್, ಆಶ್ರಫ್ ರಿಯಾಜ್, ವಿನೋದ್ ಹಾಗೂ ಪ್ರವೀಣ್ ಆಯ್ಕೆಯಾದರು.