ಮಡಿಕೇರಿ, ಮಾ. ೧೧: ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪೂದ್ರಿಮಾಡ ತಾರಾ ಅವರನ್ನು ಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲೆಯ ವಿವಿಧೆಡೆ ಶಿಕ್ಷಕಿಯಾಗಿ ೨೬ ವರ್ಷ ದುಡಿದು ಕಳತ್ಮಾಡು ಶಾಲೆಯಿಂದ ನಿವೃತ್ತರಾಗುತ್ತಿರುವ ತಾರಾ ಅವರ ಶಿಕ್ಷಣ ಸೇವೆ ಶ್ಲಾಘನೀಯ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮೇದಪ್ಪ ಹೇಳಿದರು.

ಗ್ರಾ.ಪಂ. ಅಧ್ಯಕ್ಷÀ ಮಧು, ಉಪಾಧ್ಯಕ್ಷೆ ಶಾಂತಿ, ಸದಸ್ಯರು ಗಳಾದ ಸುಶೀಲ, ರತ್ನ ಸುಬ್ಬಯ್ಯ ಮಾತನಾಡಿ, ತಾರಾ ಅವರ ಸೇವೆಯ ಕುರಿತು ಶ್ಲಾಘಿಸಿದರು.