ಭಾಗಮಂಡಲ, ಮಾ. ೧೧: ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ಕಾರ್ಯಕ್ರಮಗಳು ೨೫ನೇ ವರ್ಷಕ್ಕೆ ಕಾಲಿಡುತ್ತಿದ್ದು ಸಂಘದ ಅಭಿವೃದ್ಧಿ ಸಂತಸ ತಂದಿದೆ ಎಂದು ಸಂಘದ ಅಧ್ಯಕ್ಷ ಬೋಳನ ಡಿ. ಪ್ರಸಾದ್ ಹೇಳಿದರು.
ಇಲ್ಲಿನ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಈ ಕಾವೇರಿ ಯಾತ್ರಿಧಾಮದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದಸ್ಯ ಕುಲದೀಪ್ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ; ಎಲ್ಲರೂ ಶಿಸ್ತಿನಿಂದ ವರ್ತಿಸಬೇಕು ಎಂದರು. ಕೂಡಕಂಡಿ ಶಿವ ಮಾತನಾಡಿ ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಪ್ರತಿ ಸದಸ್ಯರಿಗೆ ಡಿವಿಡೆಂಟ್ ಹಣ ರೂ ೫೦೦ ನೀಡಲಾಗುತ್ತಿದ್ದು ಇದು ಕೊಡಗಿಗೆ ಪ್ರಥಮ. ಆಟೋ ಚಾಲಕ ಸಂಘವಾಗಿರುವುದು ಹೆಮ್ಮೆಯ ವಿಷಯ ಎಂದರು. ಸಭೆಯಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೂಡಕಂಡಿ ಶಿವ, ಕುದುಪಜೆ ಕುಲದೀಪ, ದೇವಂಗೋಡಿ ಸಂತು, ಪರಿವಾರ ಸಂತು, ತಾವೂರು ಬಶೀರ್, ಪವನ್ ಚಿಟ್ಟಿಮಲೆ ಉಪಸ್ಥಿತರಿದ್ದರು.
ಸಂಘಗಳಿಗೆ ಆಯ್ಕೆಯಾದಂತಹ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರುಗಳಿಗೆ ಹಗ್ಗಜಗ್ಗಾಟ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿತ್ತು, ಸಿರಕಜೆ ಟಿ ಭವನ್ ಕುಮಾರ್ ನಿರೂಪಿಸಿ, ವಂದಿಸಿದರು.