ಮಡಿಕೇರಿ, ಮಾ. ೧೧: ಆಕೆ ಪುಟ್ಟ ಬಾಲೆ. ಮಡಿಕೇರಿಯ ತನ್ನ ಮನೆ ಸಮೀಪದಲ್ಲೇ ಇದ್ದ ಸರ್ಕಾರಿ ಸ್ವಿಮ್ಮಿಂಗ್ ಪೂಲ್‌ಗೆ, ತನ್ನ ತಂದೆಯೊAದಿಗೆ ಪ್ರತೀ ದಿನವೂ ಹೋಗಿಬರುತ್ತಿದ್ದಳು. ಹಾಗೆ ಕಾಲಹರಣಕ್ಕಾಗಿ ಬಂದ ಹುಡುಗಿಯಲ್ಲಿ ಕಾಲಕ್ರಮೇಣ ಅದೇನೋ ಬದಲಾವಣೆ ಕಾಣಿಸಿತ್ತು. ತಂದೆ-ತಾಯಿ ಮತ್ತು ಈಜು ತರಬೇತುದಾರರ ಸತತ ಪ್ರೋತ್ಸಾಹಗಳಿಂದಾಗಿ ಅದೇ ಬಾಲಕಿ ಇಂದು, ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆದ ಅಂತಾರಾಷ್ಟಿçÃಯ ಈಜು ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳೊಂದಿಗೆ ರನ್ನರ್ ಅಪ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾಳೆ.

ಮಡಿಕೇರಿಯ ಮಾದೆಯಂಡ ಪೂವಣ್ಣ ಮತ್ತು ಗಾಯತ್ರಿ ದಂಪತಿಯ ಪುತ್ರಿ ಆರ್ನ, ತನ್ನ ಎಳವೆಯಿಂದಲೇ ಸ್ವಿಮ್ಮಿಂಗ್ ಸ್ಪರ್ಧೆಗಳಲ್ಲಿ ಅಸಾಧಾರಣ ಪ್ರತಿಭೆ ಮೆರೆದಿದ್ದಾಳೆ. ಬ್ಯಾಂಕಾಕ್‌ನಲ್ಲಿ ಕಳೆದ ಫೆಬ್ರವರಿ ೫ರಿಂದ ೯ರವರೆಗೆ ನಡೆದÀ ಅಂತಾರಾಷ್ಟಿçÃಯ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಆರ್ನ, ೩ ಚಿನ್ನ, ೨ ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳ ಜೊತೆಗೆ ರನ್ನರ್ ಅಪ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾಳೆ.

ಪ್ರಸ್ತುತ ಆರ್ನ ಚೆನ್ನೆöÊನ ಚೆಟ್ಟಿನಾಡ್ ವಿದ್ಯಾಶ್ರಮದಲ್ಲಿ ೧೧ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲ್ಯದಲ್ಲಿ ಮಡಿಕೇರಿಯಲ್ಲಿ ತರಬೇತುದಾರರಾಗಿದ್ದ ಮನೋಹರ್ ಅವರ ಸತತ ಬೆಂಬಲವೇ ಈ ಸಾಧನೆಗೆ ಪ್ರೇರಣೆಯಾಯ್ತು ಎನ್ನುತ್ತಾಳೆ ಆರ್ನ, ತಾಲೂಕು ಮಟ್ಟದ ಸ್ಪರ್ಧೆಯಿಂದ ಆರಂಭವಾದ ಆರ್ನ ಸಾಧನೆ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲದೆ, ಮೈಸೂರು ದಸರಾ, ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮತ್ತು ತಿರುವನಂತಪುರAನಲ್ಲಿ ನಡೆದ ರಾಷ್ಟç ಮಟ್ಟದ ಚಾಂಪಿಯನ್‌ಶಿಪ್‌ನಲ್ಲೂ ದಾಖಲೆ ಮಾಡಿದ್ದಾಳೆ. ರಾಷ್ಟç ಮಟ್ಟದ ದಾಖಲೆಯನ್ನೂ ಆರ್ನ ಮುರಿದಿದ್ದಾಳೆ. - ಆನಂದ್ ಕೊಡಗು