ವೀರಾಜಪೇಟೆ, ಮಾ. ೧೧: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ ಅಭಿಪ್ರಾಯಪಟ್ಟರು.
ವೀರಾಜಪೇಟೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಸ.ಹಿ.ಪ್ರಾ. ಶಾಲೆ ಹೆಗ್ಗಳದಲ್ಲಿ ನಡೆಯುತ್ತಿದ್ದು ಸ್ವಯಂ ಸೇವಾ ವಿದ್ಯಾರ್ಥಿಗಳಿಂದ ಜರುಗಿದ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಎಂಬುದು ತನ್ನೊಡನೆ ಆರಂಭ ವಾಗಬೇಕು. ಪರಿಸರ ಸ್ವಚ್ಛವಾಗಿಟ್ಟರೆ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಎಲ್ಲರೂ ಪ್ಲಾಸ್ಟಿಕ್‌ಮುಕ್ತ ಪರಿಸರದ ನಿರ್ಮಾಣಕ್ಕೆ ಮುಂದಾಗಬೇಕೆAದರು.
ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಪಂಚಾಯಿತಿ ಸದಸ್ಯರುಗಳಾದ ಅಮ್ಮಣಕುಟ್ಟಂಡ ವಸಂತ ಕಟ್ಟಿ, ಸುದೀಶ್, ರಜಾಕ್, ಲತಾ, ರಂಜಿತ್, ಎನ್‌ಎಸ್‌ಎಸ್ ಅಧಿಕಾರಿ ಶಾಂತಿಭೂಷಣ್, ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್, ಪಂಚಾಯಿತಿ ಸಿಬ್ಬಂದಿ ದಿನೇಶ್, ಸಾರ್ವಜನಿಕರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಳದ ಮುಂಭಾಗದಿAದ ಬೇಟೋಳಿ ಗ್ರಾಮ ಪಂಚಾಯಿತಿವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್, ಬಾಟಲಿಗಳನ್ನು ಹೆಕ್ಕುವುದರ ಮೂಲಕ ಸ್ವಚ್ಛತೆ ನಡೆಸಿ ಸಾರ್ವಜನಿಕ ರಿಗೆ ಸ್ವಚ್ಛತೆಯ ಅರಿವು ಮೂಡಿಸಿದರು.