ಮಡಿಕೇರಿ, ಮಾ. ೧೦: ಬೆಂಗಳೂರಿನಿAದ ಕೊಚ್ಚಿಗೆ ಸಿಂಥೆಟಿಕ್ ಡ್ರಗ್ ಕಳ್ಳಸಾಗಣೆ ಮಾಡುತ್ತಿದ್ದ ಮಡಿಕೇರಿ ಮೂಲದ ಕಿಂಗ್‌ಪಿನ್ ಒಬ್ಬನನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯಲ್ಲಿ ಬಂಧಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಕೇರಳದ ತೊಪ್ಪುಂಪಾಡಿಯಲ್ಲಿ ೨೦.೦೧. ಗ್ರಾಂ. ಎಂಡಿಎAಎ ಡ್ರಗ್ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ನಿವಾಸಿ ಕ್ರಿಸ್ಟೋ ಟಿ. ಜಾನ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬೆಂಗಳೂರಿನ ಇಬ್ಬರಿಗೆ ಎಂಡಿಎAಎ ಸರಬರಾಜು ಮಾಡಿದ್ದ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಕೊಚ್ಚಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಿಂದೆ, ಇದೇ ಪ್ರಕರಣಕ್ಕೆ ಸಂಬAಧಿಸಿದAತೆ ದಂಪತಿ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು.