ಮಡಿಕೇರಿ, ಮಾ. ೯: ೩೦ ಕೆಜಿ ೫೦೦ ಗ್ರಾಂ ಗಾಂಜಾ ದೊಂದಿಗೆ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ನಗರ ಪೊಲೀಸರು ಯಶಸ್ವಿ ಯಾಗಿದ್ದಾರೆ.
ಮೈಸೂರಿನ ಸತ್ಯನಗರ ನಿವಾಸಿ ಇಲಿಯಾಸ್ (೪೭) ಬಂಧಿತ ಆರೋಪಿಯಾಗಿದ್ದು, ಮಾರಾಟಕ್ಕೆ ಯತ್ನಿಸಿದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. ವೀರಾಜಪೇಟೆಯ ನಿಸರ್ಗ ಬಡಾವಣೆ ಕಿರುಮಕ್ಕಿ ಜಂಕ್ಷನ್ ಬಳಿ ತಾ. ೮ ರಂದು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಮಾದಕವಸ್ತು ತಡೆಗಟ್ಟುವ ಉದ್ದೇಶದಿಂದ ರಚಿಸಿರುವ ಡಿವೈಎಸ್ಪಿ ಮಹೇಶ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಪಿಎಸ್ಐ ವಾಣಿಶ್ರೀ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ದಾಳಿ ನಡೆಸಿ ಮಾಲು ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಸಹಿತ ಆರೋಪಿಯನ್ನು ಬಂಧಿಸಿದೆ. ಜಿಲ್ಲೆಯಲ್ಲಿನ ಯಾವುದೇ ಕಾಫಿ ಟ್ರೇರ್ಸ್ ಮಾಲೀಕರು ಕಾಫಿ ಖರೀದಿ ಸಂದರ್ಭ ರಶೀದಿ ನೀಡದೇ ಮಾರಾಟ ಮಾಡುವವರ ವಿವರವನ್ನು ಪಡೆಯದೇ ವ್ಯವಹಾರ ನಡೆಸಿದ್ದಲ್ಲಿ, ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡು ಬಂದಲ್ಲಿ ಕಾಫಿ ಟ್ರೇರ್ಸ್ ಮಾಲೀಕರನ್ನು ನೇರ ಹೊಣೆಗಾರರನ್ನಾಗಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಎಚ್ಚರಿಸಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡವನ್ನು ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.