ಸಿದ್ದಾಪುರ, ಮಾ. ೯: ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಶ್ರೀ ಮಹಾದೇವರ ಹಾಗೂ ಶ್ರೀ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಗಣಪತಿ ಹಾಗೂ ಶ್ರೀ ಮಹಾದೇವ ಮತ್ತು ಶ್ರೀ ದುರ್ಗಾದೇವಿ ದೇವರ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಹಾಗೂ ವಾರ್ಷಿಕ ಉತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ಐದು ದಿನಗಳ ಕಾಲ ಜರುಗಿತು.
ಪುತ್ತೂರಿನ ಬ್ರಹ್ಮಶ್ರೀ ವೇದಮೂರ್ತಿ ಗಿರೀಶ್ ತಂತ್ರಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ, ಪುಣ್ಯಹವಾಚನ, ಆಚಾರ್ಯ ವರ್ಣ, ಪ್ರಸಾದ ಪರಿಗ್ರಹ. ಪಶು ದಾನ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಬಳಿ, ದುರ್ಗಾದೇವರ ಆದಿವಾಸ ಪೂಜೆ ಇನ್ನಿತರ ಪೂಜೆ ಕಾರ್ಯಕ್ರಮಗಳು ನಡೆಯಿತು. ದೇವಾಲಯದ ಸುತ್ತಲೂ ದೇವರ ಪ್ರದಕ್ಷಣೆ ನಡೆಯಿತು.
ಐದು ದಿನಗಳ ಕಾಲ ಭಕ್ತಾದಿಗಳಿಗೆ ದೇವಾಲಯ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹೊಸಮನೆ ವಸಂತಕುಮಾರ್, ಭಾನುಪ್ರಕಾಶ್, ಕೆ.ಎನ್. ವಾಸು, ಸುರೇಂದ್ರ ಇನ್ನಿತರರು ಹಾಜರಿದ್ದರು.