ಕಣಿವೆ, ಮಾ.೮ : ತಾಲೂಕು ಬಲಿಜ ಸಮುದಾಯದ ಸಭೆ ತಾ.೧೪ ರಂದು ಕುಶಾಲನಗರದ ಬಲಿಜ ಸಮಾಜದ ಕಚೇರಿಯಲ್ಲಿ ಪೂರ್ವಾಹ್ನ ೧೦ ಗಂಟೆಗೆ ಸಮಾಜದ ಅಧ್ಯಕ್ಷ ಆರ್. ಬಾಬಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಬಲಿಜ ಸಮಾಜದ ಕುಲಗುರುಗಳಾದ ಕೈವಾರ ತಾತಯ್ಯನವರ ಜಯಂತಿಯ ಹಿನ್ನೆಲೆಯಲ್ಲಿ ಅಂದು ಸರಳವಾಗಿ ಕೈವಾರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಗುತ್ತದೆ.

ಬಳಿಕ ಅದೇ ದಿನ ೧೧ ಗಂಟೆಗೆ ಸಮಾಜದ ಆಡಳಿತ ಮಂಡಳಿ ಸಭೆಯೂ ಜರುಗಲಿದ್ದು ಮೇ ತಿಂಗಳಲ್ಲಿ ಕುಶಾಲನಗರ ಪಟ್ಟಣದಲ್ಲಿ ಕೈವಾರ ತಾತಯ್ಯ ಅವರ ಉತ್ಸವಮೂರ್ತಿ ಮೆರವಣಿಗೆ ಹಾಗೂ ಕೈವಾರ ತಾತಯ್ಯ ಜಯಂತಿ ಯನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಬಲಿಜ ಸಮಾಜದ ಅಧ್ಯಕ್ಷ ಆರ್. ಬಾಬಣ್ಣ ತಿಳಿಸಿದ್ದಾರೆ.