ಮಡಿಕೇರಿ, ಮಾ.೭: ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ. ೧೩ ರಂದು ಕುಂಬ್ಯಾರು ಕಲಾಡ್ಚ (ವಾರ್ಷಿಕ) ಹಬ್ಬ ನಡೆಯಲಿದೆ.
ತಾ. ೧೩ ರಂದು ಬೆಳಿಗ್ಗೆ ೫.೩೦ ಗಂಟೆಗೆ ಅಭಿಷೇಕ ಪೂಜೆ, ೬ ಗಂಟೆಗೆ ಪ್ರಾತಃಕಾಲದ ಪೂಜೆ, ಬೆಳಿಗ್ಗೆ ೧೦ ಗಂಟೆಗೆ ಎತ್ತು ಪೋರಾಟ, ಬೆಳಿಗ್ಗೆ ೧೦.೩೦ ಗಂಟೆಗೆ ತುಲಾಭಾರ ಸೇವೆ, ಬೆಳಿಗ್ಗೆ ೧೧ ಗಂಟೆಗೆ ಭಕ್ತಾಧಿಗಳ ಸೇವಾ ಪೂಜೆ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ನಂತರ ಮಧ್ಯಾಹ್ನ ೨ ಗಂಟೆಗೆ ದೇವರು ಹೊರಗೆ ಬಂದು ಮಲ್ಮಕ್ಕೆ ತೆರಳುವುದು, ಸಂಜೆ ೬ ಗಂಟೆಗೆ ದೇವರು ಮಲ್ಮದಿಂದ ಬಂದು ದೇವರ ಬಲಿ ನೃತ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.