ಕೊಡಗಿನ ೮ ಕ್ರೀಡಾಪಟುಗಳು ಭಾಗಿ
ಮಡಿಕೇರಿ, ಫೆ. ೨೦: ತಾ. ೨೮ ರವರೆಗೆ ಕಾಕಿನಾಡ್ ಡಿಎಸ್‌ಎ ಮೈದಾನದಲ್ಲಿ ಸರ್ಕಾರಿ ನೌಕರರ ರಾಷ್ಟಿçÃಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು, ಕೊಡಗು ಜಿಲ್ಲೆಯ ಹಾಕಿ ತಂಡ ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಗೊಂಡಿದೆ. ಸತತವಾಗಿ ೧೮ ವರ್ಷಗಳಿಂದ ರಾಜ್ಯಮಟ್ಟದಲ್ಲಿ ಚಾಂಪಿಯನ್ ಶಿಪ್ ಕೀರ್ತಿಗೆ ಭಾಜನರಾಗಿತ್ತು. ಇದೀಗ ೧೯ನೇ ವರ್ಷ ಕೂಡ ಜಯ ಸಾಧಿಸಿ ರಾಷ್ಟçಮಟ್ಟಕ್ಕೆ ಆಯ್ಕೆಗೊಂಡಿದೆ. ಕಳೆದ ಬಾರಿ ಕೊಡಗಿನ ೭ ಹಾಕಿ ಆಟಗಾರರು ರಾಷ್ಟçಮಟ್ಟದಲ್ಲಿ ಭಾಗವಹಿಸಿ ರಾಜ್ಯಕ್ಕೆ ಹಾಗೂ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದರು. ಈ ಬಾರಿ ೮ ಕ್ರೀಡಾಪಟುಗಳು ಆಯ್ಕೆಗೊಂಡು ಪಾಲ್ಗೊಳ್ಳಲಿದ್ದಾರೆ. ಕೊಡಗಿನಿಂದ ತಂಡದ ತರಬೇತುದಾರರಾಗಿ ನವೀನ್, ಆಟಗಾರರಾಗಿ ಜಾಗೃತ್, ಪೂಣಚ್ಚ, ಚಂದ್ರಶೇಖರ್, ಮೌನ ಮೊಣ್ಣಪ್ಪ, ಸೋಮಣ್ಣ, ಮಾಚಯ್ಯ ಹಾಗೂ ಸತೀಶ್ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.