ಸಿದ್ದಾಪುರ, ಫೆ. ೨೦: ಸಿದ್ದಾಪುರದ ಶ್ರೀ ಗೌರಿಶಂಕರ ದೇವಾಲಯದ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೨೫ ರಿಂದ ೨೮ ರವರೆಗೆ ನಡೆಯಲಿದೆ.
ತಾ. ೨೫ ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ನಾಂದಿ, ಪುಣ್ಯಾಹ, ಗಣಪತಿ ಹೋಮ, ನವಗ್ರಹ ಪೂಜೆ, ರುದ್ರಾಭಿಷೇಕ, ಪರಿವಾರ ದೇವರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ತಾ. ೨೬ ರಂದು ಬೆಳಿಗ್ಗೆ ಇರುಬೆಳಕು, ೯ ಗಂಟೆಗೆ ಅನ್ನಪೂರ್ಣೇಶ್ವರಿ ದೇವರಿಗೆ ಅಲಂಕಾರ ಪೂಜೆ, ಕುಂಕುಮಾರ್ಚನೆ, ರುದ್ರಾಭಿಷೇಕ, ಮಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ ಗಂಟೆಗೆ ನೆರಪು, ದೇವರ ಬಲಿ, ರಾತ್ರಿ ಶಿವರಾತ್ರಿ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಫಲಹಾರ. ತಾ. ೨೭ ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನಾಗತಂಬಿಲ, ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ದೇವರ ಅವಭೃತಕ್ಕೆ ಹೊರಡುವುದು, ನೃತ್ಯ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ. ತಾ ೨೮ ರಂದು ಬೆಳಿಗ್ಗೆ ಪುಣ್ಯಾಹ, ಸಂಪ್ರೋಕ್ಷಣೆ. ಕಲಶ ಪೂಜೆ, ಪರಿವಾರ ದೇವರಿಗೆ ಕಲಶ ಅಭಿಷೇಕ ಪೂಜೆ, ಶ್ರೀದೇವರಿಗೆ ಕಲಶ ಅಭಿಷೇಕ ಪೂಜೆ, ಅಲಂಕಾರ ಪೂಜೆ, ಮಂಗಳ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.