ಸೋಮವಾರಪೇಟೆ, ಫೆ. ೧೪: ತಾಲೂಕು ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್‌ನ ತ್ರೈಮಾಸಿಕ ಸಭೆ ಸ್ಥಳೀಯ ಸಿ.ಕೆ. ರೋಹಿತ್ ಅವರ ಅಧ್ಯಕ್ಷತೆಯಲ್ಲಿ ಅಲೋಕ ರೆಸಿಡೆನ್ಸಿ ಸ್ಟೇಯಲ್ಲಿ ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಕಾರ್ಮಿಕ ಅಧಿಕಾರಿ ಟಿ. ಕಾವೇರಿ ಭಾಗವಹಿಸಿ ಮಾತನಾಡಿ, ಹೋಂ ಸ್ಟೇಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂಬAಧಿಸಿದ ಯೋಜನೆUವಿವರಿಸಿದರು.
ನಿವೃತ್ತ ಕಾರ್ಮಿಕ ಅಧಿಕಾರಿ ಎನ್.ಬಿ. ರಾಮಚಂದ್ರ ಅವರು ಹೋಂ ಸ್ಟೇಗಳಿಗೆ ಸಂಬAಧಪಟ್ಟAತೆ ಕಾರ್ಮಿಕ ಇಲಾಖೆಯಿಂದ ಅಳವಡಿಸಿರುವ ಕಾಯ್ದೆಗಳ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸಲ್ಪಡುವ ಹೋಂ ಸ್ಟೇಗಳು ಅನುಸರಿಸಬೇಕಾದ ಕ್ರಮಗಳು, Àಳ ಬಗ್ಗೆ ಅಳವಡಿಸಬೇಕಾದ ಮೂಲಭೂತ ಸೌಕರ್ಯಗಳು, ಸಕ್ಷಮ ಕಚೇರಿಗಳಿಂದ ಪಡೆದುಕೊಳ್ಳಬೇಕಾದ ಅನುಮತಿಗಳ ಬಗ್ಗೆ ವಿವರಣೆ ನೀಡಿದರು.
ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ ಸಿ.ಎಂ. ಧರ್ಮಪ್ಪ, ಹೋಂ ಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದನ್, ಹೋಂ ಸ್ಟೇ ಮಾಲಿಕರಾದ ರಾಜಶ್ರೀ ಸದಾನಂದ್ ಉಪಸ್ಥಿತರಿದ್ದರು.