ಚೆಯ್ಯಂಡಾಣೆ, ಫೆ. ೫: ಇತಿಹಾಸ ಪ್ರಸಿದ್ಧ ಎಮ್ಮೆಮಾಡುವಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್, ಸಯ್ಯದ್ ಹಸನ್ ಸಖಾಫ್ ಹಳ್ ರಮಿ ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ಫೆಬ್ರವರಿ ೨೧ರಿಂದ ಆರಂಭಗೊಳ್ಳಲಿರುವ ಉರೂಸ್ ಸಮಾರಂಭದ ಪ್ರಯುಕ್ತ ನಡೆದ "ಉರೂಸ್ ಕುರಿಕ್ಕಲ್" ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಎಮ್ಮೆಮಾಡುವಿನಲ್ಲಿ ಸೋಮವಾರ ಸಂಜೆ ಅಸರ್ ನಮಾಜಿನ ಬಳಿಕ ಸಾಂಪ್ರದಾಯದAತೆ ದಫ್ ಪ್ರದರ್ಶನದೊಂದಿಗೆ ಸೂಫಿ ಶಹೀದ್ ದರ್ಗಾಕ್ಕೆ ತೆರಳಿದ ಸಮುದಾಯ ಬಾಂಧವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.ಎಮ್ಮೆಮಾಡು ಮಸೀದಿಯ ಖತೀಬರಾದ ರಾಝಿಕ್ ಫೈಝಿ, ಮುದರ್ರಿಸ್ ಹಂಝ ಸಖಾಫಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಎಮ್ಮೆಮಾಡು ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಸಖಾಫಿ ಅವರು ಮಾತನಾಡಿ, ಫೆ.೨೧ ರಿಂದ ೨೮ ರವರೆಗೆ ನಡೆಯುವ ಉರೂಸ್ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸಲು ತೀರ್ಮಾನಿಸಲಾಗಿದೆ. ಉರೂಸ್ ಸಮಾರಂಭದ ಅಂಗವಾಗಿ ಸಂಪ್ರದಾಯದAತೆ ಉರೂಸ್ ಕುರಿಕ್ಕಲ್ ಕಾರ್ಯಕ್ರಮ ನಡೆಸಲಾಗಿದೆ. ಉರೂಸ್ ಮುಗಿಯುವವರೆಗೂ ಎಮ್ಮೆಮಾಡು ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದಕೊಡದೆ ಗ್ರಾಮದಲ್ಲಿ ಎಲ್ಲರೂ ಪರಸ್ಪರ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಉರೂಸ್ ಸಮಾರಂಭದ ಯಶಸ್ವಿಗೆ ಸಹಕಾರ ನೀಡಬೇಕೆಂದರು.
ಜಮಾಅತ್ ಉಪಾಧ್ಯಕ್ಷ ಮೊಹಮ್ಮದ್ ಅಶ್ರಫ್ ಮಾತನಾಡಿ, ಪ್ರತಿ ವರ್ಷ ಆಚರಿಸುವಂತೆ ಈ ವರ್ಷವು ಕೂಡ ಉರೂಸ್ ಕಾರ್ಯಕ್ರಮ ಅತೀ ವಿಜೃಂಭಣೆಯಿAದ ನಡೆಯಲಿದೆ.ಉರೂಸ್ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಜಾತಿ, ಧರ್ಮ, ಬೇಧ ಮರೆತು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಸಿ.ಕೆ. ಹಾರಿಸ್, ಸಹ ಕಾರ್ಯದರ್ಶಿ ಸಿ.ಎಸ್. ಇಬ್ರಾಹಿಂ, ಸಯ್ಯದ್ ಅಝೀಝ್ ತಂಙಳ್, ಸಯ್ಯದ್ ಇಲ್ಯಾಸ್ ತಂಙಳ್, ಶಿಹಾಬುದ್ದೀನ್ ಅಲ್ ಐದರೂಸಿ ಕಿಲ್ಲೂರ್ ತಂಙಳ್, ಹುಸೈನ್ ಸಖಾಫಿ, ಜಮಾಅತ್ ಕೋಶಾಧಿಕಾರಿ ಆಲಿ ನೆರೂಟ್, ಹಂಝ ಸಅದಿ, ಕನ್ನಡಿಯಂಡ ಹಸೈನಾರ್, ಪೊಟ್ಟಂಡ ಅಬ್ದುಲ್ಲಾ, ಕಂಬೇರ ಉಸ್ಮಾನ್, ಅಬ್ದುಲ್ ಲತೀಫ್ ಕೂರುಳಿ, ಜಮಾಅತ್ ಮಾಜಿ ಅಧ್ಯಕ್ಷರುಗಳು, ಶಹೀದಿಯ ಅನಾಥ ಮಂದಿರದ ಪದಾಧಿಕಾರಿಗಳು, ರಿಫಾಹಿಯ್ಯ ರಾತೀಬ್ ಸಂಘದ ಪದಾಧಿಕಾರಿಗಳು, ಊರಿನ ಪ್ರಮುಖರು, ಜಮಾಅತ್ನ ಸರ್ವಸದಸ್ಯರು, ಮತ್ತಿತರರು ಪಾಲ್ಗೊಂಡಿದ್ದರು.