ಮಡಿಕೇರಿ, ಫೆ. ೪: ಭಾಗಮಂಡಲದಲ್ಲಿ ನಿರ್ಮಾಣ ವಾಗಿರುವ ಮೇಲ್ಸೇತುವೆಗೆ ಸ್ವಾತಂತ್ರö್ಯ ಹೋರಾಟಗಾರರಾದ ಕೆದಂಬಾಡಿ ರಾಮಯ್ಯ ಗೌಡರ ಹೆಸರನ್ನು ನಾಮಕರಣ ಮಾಡಿ ಪುತ್ಥಳಿಯನ್ನು ಸ್ಥಾಪಿಸಬೇಕೆಂದು ಭಾಗಮಂಡಲದ ಗ್ರಾಮ ಪಂಚಾಯಿತಿಯ ಪಿಡಿಓ ನಂದ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೊಸೂರು ಸತೀಶ್, ಕುಯ್ಯುಮುಡಿ ಮನೋಜ್, ಕಾರುಗುಂದ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಪ್ಪು, ಅರೆಭಾಷೆ ಅಕಾಡೆಮಿ ಸದಸ್ಯ ಸೂದನ ಈರಪ್ಪ, ಕುದುಪಜೆ ಪ್ರಕಾಶ್, ಕೊಡಗು ಗೌಡ ವಿದ್ಯಾಸಂಘದ ದೇವಂಗೋಡಿ ಹರ್ಷ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ನಿಡ್ಯಮಲೆ ಚಲನ್, ಶೆಟ್ಟಿಜನ ದಿಲ್ಲಿ, ಮತ್ತು ಪದಾಧಿಕಾರಿಗಳು, ಪಂಚಾಯಿತಿ ಸದಸ್ಯರಾದ ದಂಡಿನ ಜಯಂತ್, ನಿಡ್ಯಮಲೆ ರವಿ, ಗ್ರಾಮಸ್ಥರಾದ ಕೇಕಡ ಇಂದುಮತಿ, ಕೋಳಿಬೈಲು ಮಾಲತಿ, ಅಮೆ ಜಯ, ಕೆದಂಬಾಡಿ ವಿವೇಕ್ ಹಾಜರಿದ್ದರು.