ಮಡಿಕೇರಿ, ಫೆ. ೪: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ೨೦೨೫-೨೬ ನೇ ಶೈಕ್ಷಣಿಕ ವರ್ಷಕ್ಕೆ ೯ ಮತ್ತು ೧೧ ನೇ ತರಗತಿಗೆ ಪ್ರವೇಶ ಬಯಸುವ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಫೆಬ್ರವರಿ, ೦೮ ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರವೇಶ ಪರೀಕ್ಷೆಯು ಮಡಿಕೇರಿ ಸಮೀಪದ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆಯಲಿದೆ.

ಈಗಾಗಲೇ ಪರೀಕ್ಷೆಯನ್ನು ಬರೆಯಲು ಅರ್ಜಿ ಹಾಕಿದವರು ಪ್ರವೇಶಪತ್ರದೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಂದು ಪರೀಕ್ಷೆಗೆ ಹಾಜರಾಗುವಂತೆ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.