ಮಡಿಕೇರಿ, ಫೆ. ೩: ಬಿರುನಾಣಿ ಗ್ರಾಮ ಪಂಚಾಯಿತಿಯ ಬಾಡಗರಕೇರಿ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಹುಲಿ ದಾಳಿ ನಡೆಸಿ ಆಡುಗಳನ್ನು ಕೊಂದಿರುವ ಸ್ಥಳಕ್ಕೆ ಶ್ರೀಮಂಗಲ ಆರ್.ಎಫ್.ಓ ಅರವಿಂದ್ ಅವರು ಸಿಬ್ಬಂದಿಗಳೊAದಿಗೆ ಭೇಟಿ ನೀಡಿ ಸ್ಥಳದಲ್ಲಿ ಅಳವಡಿಸಿರುವ ಕೆಮರಾವನ್ನು ಪರಿಶೀಲಿಸಿದರು. ಆದರೆ ಮತ್ತೆ ಹುಲಿಯ ಚಲನವಲನ ಕಂಡು ಬಂದಿಲ್ಲ. ಮಾಲೀಕರಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವುದಾಗಿ ಅವರು ಭರವಸೆಯಿತ್ತರು. ಗ್ರಾ.ಪಂ. ಅಧ್ಯಕ್ಷ ಅಮ್ಮತ್ತಿರ ರಾಜೇಶ್, ಬಿಜೆಪಿ ಮಂಡಲ ಕೃಷಿ ಮೋರ್ಚಾ ಅಧ್ಯಕ್ಷ ಗುಡ್ಡಮಾಡ ಅಪ್ಪಿ ಸುಬ್ರಮಣಿ, ಮತ್ತಿತರರು ಹಾಜರಿದ್ದರು.