ಗೋಣಿಕೊಪ್ಪಲು, ಫೆ. ೩: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯು ಸಂಪೂರ್ಣ ಹಾಳಾಗಿದ್ದನ್ನು ಖುದ್ದಾಗಿ ವೀಕ್ಷಣೆ ಮಾಡಿದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಮನೆಗೆ ಬೇಕಾದ ಶೀಟ್‌ಗಳನ್ನು ವೈಯಕ್ತಿಕವಾಗಿ ನೀಡಿದರು.
ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರ‍್ಮುಗಂ ಎಂಬವರ ಮನೆಗೆ ಈ ಹಿಂದೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಮಸ್ಯೆ ಎದುರಾಗಿತ್ತು. ಈ ವೇಳೆ ಶಾಸಕ ಪೊನ್ನಣ್ಣ ಭೇಟಿ ನೀಡುವ ಮೂಲಕ ಮನೆಗೆ ಬೇಕಾದ ಶೀಟ್‌ಗಳನ್ನು ವೈಯಕ್ತಿಕವಾಗಿ ನೀಡುವುದಾಗಿ ಭರವಸೆ ನೀಡಿದ್ದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್ ಅವರು ರ‍್ಮುಗಂರವರಿಗೆ ೩೫ ಸಾವಿರ ಬೆಲೆ ಬಾಳುವ ‘ಟಾಟಾ’ ಶೀಟ್‌ಗಳನ್ನು ವಿತರಿಸಿದರು. ಶೀಟ್ ವಿತರಣೆ ಸಂದರ್ಭ ದೇವರಪುರ ಜೋನಲ್ ಕಾಂಗ್ರೆಸ್ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸಂತ್ ಕುಮಾರ್ ಉಪಸ್ಥಿತರಿದ್ದರು.