ಶ್ರೀಮಂಗಲ, ಫೆ. ೩: ಶ್ರೀಮಂಗಲ ಜೂನಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಪ್ರಥಮ ಸಮ್ಮಿಲನ ಸಭೆಯಲ್ಲಿ ಆಯ್ಕೆ ಮಾಡಿದ್ದ ೩೦ ಜನ ನಿರ್ದೇಶಕರ ಪೈಕಿ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷರಾಗಿ ಮದ್ರೀರ ವಿಷ್ಣು, ಉಪಾಧ್ಯಕ್ಷರಾಗಿ ಮಚ್ಚಮಾಡ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಚ್ಚಮಾಡ ವಿಜಯ, ಸಹಕಾರ್ಯದರ್ಶಿಗಳಾಗಿ ಮನ್ನೇರ ರಮೇಶ್, ಅಪ್ಪಂಡೇರAಡ ಸೀತಾ ಪೊನ್ನಪ್ಪ , ಸಂಘಟನಾ ಕಾರ್ಯದರ್ಶಿಯಾಗಿ ಚೆಟ್ಟಂಗಡ ಕಂಬ ಕಾರ್ಯಪ್ಪ, ಸಹ ಸಂಘಟನಾ ಕಾರ್ಯದರ್ಶಿಗಳಾಗಿ ಚೋಡುಮಾಡ ಸೂರತ್ ಸುಬ್ಬಯ್ಯ, ಕಟ್ಟೇರ ಕುಶಾಲಪ್ಪ, ದೇಕಮಾಡ ನವೀನ್, ಚಟ್ಟಂಡ ಚರ್ಮಣ, ಖಜಾಂಚಿಯಾಗಿ ಪ್ರಾಂಶುಪಾಲರಾದ ಮುಲ್ಲೇಂಗಡ ಸೋಮಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶ್ರೀಮಂಗಲ ವಿದ್ಯಾಸಂಸ್ಥೆ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ನಡೆಯಿತು. ನಂತರ ನೂತನ ಅಧ್ಯಕ್ಷ ಮದ್ರೀರ ವಿಷ್ಣು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆದು ನಿರ್ದೇಶಕರು ಹಲವು ಸಲಹೆಗಳನ್ನು ನೀಡಿದರು. ಮುಂದಿನ ದಿನಗಳಲ್ಲಿ ಅತ್ಯಂತ ಸುಂದರ ಪರಿಸರದಲ್ಲಿ ವಿಶಾಲ ಆವರಣದಲ್ಲಿರುವ ಕಾಲೇಜಿನ ಕಟ್ಟಡಗಳ ದುರಸ್ತಿಯೊಂದಿಗೆ ೨೦೨೭ ಇಸವಿಯಲ್ಲಿ ಕಾಲೇಜಿನ ಅಮೃತ ಮಹೋತ್ಸವವನ್ನು ವಿಜೃಂಭಣೆಯಿAದ ಆಚರಿಸುವಂತೆ ತೀರ್ಮಾನ ಮಾಡಲಾಯಿತು. ಮುಂದಿನ ದಿನಗಳಲ್ಲಿ ಶ್ರೀಮಂಗಲ ಜೂನಿಯರ್ ಕಾಲೇಜನ್ನು ಮಾದರಿ ವಿದ್ಯಾಸಂಸ್ಥೆಯಾಗಿ ಮಾಡಲು ನಿರ್ಧರಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಶ್ರೀಮಂಗಲ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬೋಡಂಗಡ ಅಯ್ಯಪ್ಪ, ಉಪಾಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿ ಕಾಳಿಮಾಡ ಬೆಳ್ಯಪ್ಪ, ಖಜಾಂಚಿ ವಿನಯ್, ನಿರ್ದೇಶಕರಾದ ಚೆಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಪ್ರಾಂಶುಪಾಲರಾದ ಮುಲ್ಲೇಂಗಡ ಸೋಮಯ್ಯ ಉಪಸ್ಥಿತರಿದ್ದರು.