ಐಗೂರು, ಫೆ. ೩: ಭಾರತದ ಪ್ರಜೆಗಳು ದೇಶದ ಯಾವುದೇ ಭಾಗದಲ್ಲಿ ಜೀವಿಸುತ್ತಿದ್ದರೂ ದೇಶಭಕ್ತಿಯನ್ನು ಮೈಗೂಡಿಸಿಕೊಂಡಿರಬೇಕೆAದು ನಿವೃತ್ತ ಶಿಕ್ಷಕರಾದ ಸೋಮಯ್ಯ ಕರೆ ನೀಡಿದರು. ಅವರು ಕಾಜೂರಿನ ಸ. ಹಿ. ಪ್ರಾ ಶಾಲೆಯ ವಾರ್ಷಿಕ ಕ್ರೀಡೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿ. ಶಿಕ್ಷಕ ಮೇದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಎಸ್‌ಡಿಎಸಿ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಅತಿಥಿಗಳಾದ ಎಸ್‌ಬಿಐನ ರೀಜನಲ್ ಮ್ಯಾನೇಜರ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಜಿತ್ ಮಾತನಾಡಿ, ತಾನು ಎಸ್‌ಬಿಐನ ಉನ್ನತ ಹುದ್ದೆಯನ್ನು ಅಲಂಕರಿಸಲು ಕಾಜೂರು ಶಾಲೆಯು ಅಡಿಪಾಯ ಹಾಕಿಕೊಟ್ಟಿದೆ. ಸಿಎಸ್‌ಆರ್ ಅನುದಾನದಿಂದ ಬಂದ ಹಣವನ್ನು ಪಾರದರ್ಶಕವಾಗಿ ಬಳಸಬೇಕೆಂದರು. ಶಾಲೆಯ ಹಳೆಯ ವಿದ್ಯಾರ್ಥಿ, ರಾಜ್ಯಮಟ್ಟದ ಪ್ರಶಸ್ತಿ ಪಡೆದ ಚಿತ್ತಾರ ವಾಹಿನಿಯ ವಿಶ್ವ ಕುಂಬೂರು ತಾನು ಶಿಕ್ಷಣ ಪಡೆದ ಶಾಲೆಗೆ ಅಭಿನಂದನೆ ಸಲ್ಲಿಸಿದರು.ಅತಿಥಿಗಳಾದ ಹಳೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರಿಗೆ ಸನ್ಮಾನ ನಡೆದವು. ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಕ್ರೀಡಾಕೂಟಗಳು ನಡೆದು, ಬಹುಮಾನ ವಿತರಿಸಲಾಯಿತು. ಸಂಜೆ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಶಿಕ್ಷಕಿ ಸರಳಕುಮಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಆಶಾ ಚಂಗಪ್ಪ, ಮಾಯ, ನಿವೃತ್ತ ಶಿಕ್ಷಕಿ ವಸಂತಿ, ಶ್ರೀಜಿತ್, ಸಬಿತಾ ಚೆನ್ನಕೇಶವ, ವಕೀಲರಾದ ಕೆ. ಎಸ್. ಪದ್ಮನಾಭ, ಡಿ.ಡಿ. ಬೆಳ್ಯಪ್ಪ, ಮಚ್ಚಂಡ ಅಶೋಕ್, ಸುಮಾಚಂದ್ರ, ಎಸ್.ಎಲ್. ರಮೇಶ್, ಮುತ್ತಪ್ಪ, ವಿಶ್ವ ಕುಂಬೂರು, ಮುಖ್ಯ ಶಿಕ್ಷಕಿ ಸರಳಾಕುಮಾರಿ ಶಿಕ್ಷಕ ಸತೀಶ್, ಶಿಕ್ಷಕಿಯರಾದ ಅನುಸೂಯ, ಇಂದಿರಾ, ವಿದ್ಯಾ, ಸ್ವರ್ಣ, ಲಾವಣ್ಯ ಭಾಗವಹಿಸಿದ್ದರು.