ಮಡಿಕೇರಿ, ಫೆ. ೩: ಯವಕಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಸಮಾರಂಭವು ಎರಡು ದಿನಗಳು ವಿಜೃಂಭಣೆಯಿAದ ನೆರವೇರಿತು.

ತಾ. ೨೬ರಂದು ಮೊದಲಿಗೆ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸ ಲಾಯಿತು. ಧ್ವಜಾರೋಹಣವನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತಮ್ಮಯ್ಯ ನೆರವೇರಿಸಿದರು. ನಂತರ ಗ್ರಾಮಸ್ಥರಿಗೆ ವಾಲಿಬಾಲ್ ಸ್ಪರ್ಧೆ ಏರ್ಪಡಿಸ ಲಾಯಿತು, ಸುಮಾರು ೫ ತಂಡಗಳು ಭಾಗವಹಿಸಿದ್ದವು.

ತಾ. ೨೭ರಂದು ಶಾಲಾ ನಾಯಕ ಚೇತನ್ ಅವರಿಂದ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ವಾರ್ಷಿಕೋತ್ಸವವನ್ನು ಮುಂದುವರೆಸಲಾಯಿತು. ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ರೀತಿಯ ಆಟಗಳನ್ನು ನಡೆಸಲಾಯಿತು, ಮಕ್ಕಳಿಂದ ದೈಹಿಕ ಕಸರತ್ತು, ಡಂಬಲ್ಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.ಗ್ರಾಮಸ್ಥರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ಮನರಂಜನೆ ಆಟಗಳನ್ನು ಏರ್ಪಡಿಸಲಾಗಿತ್ತು.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಎರಡು ದಿನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ನಿವೃತ್ತ ಶಿಕ್ಷಕಿ ರೇಖಾ ಉಲ್ಲಾಸ್ ಭಾಗವಹಿಸಿ ಮಕ್ಕಳಿಗೆ ಹಿತವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಕೆ.ಪಿ. ತಮ್ಮಯ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಕ್ಕಬೆ -ಕುಂಜಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂಪನ್ ಅಯ್ಯಪ್ಪ, ಪಂಚಾಯಿತಿ ಸದಸ್ಯರಾದ ಭರತ್ ಚಂದ್ರ ದೇವಯ್ಯ, ಇಂದಿರಾ, ಪ್ರಕಾಶ್, ಯವಕಪಾಡಿ ಅಂಗನವಾಡಿ ಕಾರ್ಯಕರ್ತೆ ಪೊನ್ನು, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಸುಬ್ರಮಣಿ, ಹಾಕಿ ಕ್ರೀಡಾಪಟು ಯಶವಂತ್, ಶಾಲಾ ಹಳೆಯ ವಿದ್ಯಾರ್ಥಿ ದೇವಯ್ಯ, ಗ್ರಾಮಸ್ಥರಾದ ಧನು, ಸುಂದರ, ಮಿಲನ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಅತಿಥಿ ಶಿಕ್ಷಕಿಯರಾದ ಅಶ್ವಿನಿ, ಮುತ್ತಮ್ಮ ಹಾಗೂ ಪೋಷಕರು ಭಾಗವಹಿಸಿದ್ದರು.