ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಫೆ. ೩ : ವಾಣಿಜ್ಯ ನಗರಿ ಗೋಣಿಕೊಪ್ಪ ಜನತೆಯ ಹಲವು ವರ್ಷಗಳ ಬೇಡಿಕೆಯ ಈಡೇರಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಮಾರ್ಚ್ ತಿಂಗಳ ವೇಳೆ ಗೋಣಿಕೊಪ್ಪಲುವಿನ ನೂತನ ಬಸ್ ನಿಲ್ದಾಣವು ಲೋಕಾರ್ಪಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ನಿಲ್ದಾಣದ ಕಾಮಗಾರಿಯೂ ಒಂದು ಹಂತದಲ್ಲಿ ಸಂಪೂರ್ಣಗೊAಡಿದ್ದು ಅಂತಿಮ ಹಂತದ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಮೊದಲ ಹಂತದ ಕಾಮಗಾರಿ ಸಂಪೂರ್ಣಗೊAಡಿದ್ದು ಗೋಡೆಗಳಿಗೆ ಸಿಮೆಂಟ್ ಸಾರಣಿಗೆ ಕಾರ್ಯ ನಡೆಯುತ್ತಿದೆ. ಶೌಚಾಲಯದ ಕಾರ್ಯವೂ ಆರಂಭಗೊAಡಿದ್ದು ವಿದ್ಯುತ್ ಕೆಲಸವು ಬಿರುಸಿನಿಂದ ಸಾಗುತ್ತಿದೆ. ಈ ಭಾಗದ ಜನರ ಬೇಡಿಕೆಯು ಸದ್ಯದಲ್ಲಿಯೇ ಈಡೇರಲಿದೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಗೋಣಿಕೊಪ್ಪ ಬಸ್ ನಿಲ್ದಾಣದ ಕಾಮಗಾರಿಗೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನವನ್ನು ಒದಗಿಸುವ ಮೂಲಕ ರೂ. ೨ ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ೨೦೨೪ರ ಫೆ. ೨೯ ನೆರವೇರಿಸಿದ್ದರು. ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಗುಣಮಟ್ಟದಿಂದ ಪೂರೈಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದರು. ಶಾಸಕರ ಸೂಚನೆ ಮೇರೆ ನಿಗದಿತ ಸಮಯದಲ್ಲಿ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಉಳಿದಿವೆ. ಕಳೆದ ಒಂದು ದಶಕಗಳಿಂದ ಉತ್ತಮ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ನಾಗರಿಕರು ಹಾಗೂ ಪ್ರಯಾಣಿ ಕರು ಕಷ್ಟ ಅನುಭವಿಸುತ್ತಿದ್ದರು. ಇದೀಗ ಉತ್ತಮ ಬಸ್ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ನಿಲ್ದಾಣದೊಂದಿಗೆ ಅಗತ್ಯ ಸೌಕರ್ಯಗಳ ಸೇವೆಯು ನಾಗರಿಕರಿಗೆ ಲಭ್ಯವಾಗಲಿದೆ.
ಶಾಸಕ ಎ.ಎಸ್. ಪೊನ್ನಣ್ಣ ತಮ್ಮ ಚುನಾವಣಾ ಸಂದರ್ಭ ಗೋಣಿಕೊಪ್ಪ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸ ಲಾಗುವುದು ಎಂದು ನಾಗರಿಕರಿಗೆ ಭರವಸೆ ನೀಡಿದ್ದರು. ನೀಡಿದ ಭರವಸೆ ಯಂತೆಯೇ ವಿಶೇಷ ಅನುದಾನವನ್ನು ತರುವ ಮೂಲಕ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಮಾರ್ಚ್ ತಿಂಗಳಿನಲ್ಲಿ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ನೂತನ ಬಸ್ ನಿಲ್ದಾಣದ ಸೇವೆಯು ಲಭ್ಯವಾಗಲಿದೆ. ಇದರಿಂದ ಹಲವು ದಶಕಗಳಿಂದ ಸಾರ್ವಜನಿಕರ ಬಹು ಬೇಡಿಕೆಯಾಗಿದ್ದ ಸುಸಜ್ಜಿತ ಬಸ್ ನಿಲ್ದಾಣವು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಆ ನಿಟ್ಟಿನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಬೆಂಗಳೂರಿನ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ತಮ್ಮ ಕೆಲಸವನ್ನು ಬಿರುಸಿನಿಂದ ನಿರ್ವಹಿಸುತ್ತಿದ್ದಾರೆ.
ಕಳೆದ ೧೦ ವರ್ಷಗಳ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಅವಧಿಯಲ್ಲಿ ೩೮ ವರ್ಷದ ಬಸ್ ನಿಲ್ದಾಣ ಒಂದು ಭಾಗ ಮುರಿದುಬಿದ್ದಿತ್ತು. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಹಿನ್ನಲೆಯಲ್ಲಿ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲು ಅಂದಿನ ಗ್ರಾ.ಪಂ. ಆಡಳಿತ ಮಂಡಳಿಯು ತೀರ್ಮಾನ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪುರಸಭೆ ಇದ್ದ ಸಂದರ್ಭ ಬುಟ್ಟಿಯಂಡ ಅಪ್ಪಾಜಿ ಅವರು ಅಧ್ಯಕ್ಷರಾಗಿದ್ದ ವೇಳೆ ಬಸ್ ನಿಲ್ದಾಣ, ತಂಗುದಾಣ ಹಾಗೂ ಶೌಚಾಲಯವನ್ನು ೧೯೭೦ರ ದಶಕದಲ್ಲಿ ನಿರ್ಮಾಣ ಮಾಡಲಾಗಿತ್ತು. ಜಿಲ್ಲೆಯಲ್ಲಿಯೇ ಮಾದರಿ ಬಸ್ ನಿಲ್ದಾಣ ಎಂಬ ಹೆಸರು ಗಳಿಸಿತ್ತು. ಪ್ರಸ್ತುತ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ. ಕಚೇರಿ, ಮಹಿಳೆಯರ ವಿಶೇಷ ಕೊಠಡಿ, ಶೌಚಾಲಯ ಸೇರಿದಂತೆ ಹತ್ತಕ್ಕೂ ಅಧಿಕ ವಾಣಿಜ್ಯ ಮಳಿಗೆಗಳು, ಸುಸಜ್ಜಿತ ಹೊಟೇಲ್ ಕೊಠಡಿ ಇರಲಿದೆ. ಸರ್ಕಾರದ ಸಂಸ್ಥೆಯಾಗಿರುವ ಕರ್ನಾಟಕ ರೂರಲ್ ಇನ್ಸ್ಸ್ಪಾಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಬೆಂಗಳೂರು ಇವರು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.