ಸುಂಟಿಕೊಪ್ಪ, ಫೆ. ೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಸುಂಟಿಕೊಪ್ಪ ವಲಯ ವ್ಯಾಪ್ತಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಿಗೆ ೪೩ ಬೆಂಚ್ ಡೆಸ್ಕ್ ವಿತರಣೆ ಮಾಡಲಾಯಿತು.
ಸುಂಟಿಕೊಪ್ಪ ವಲಯದ ಸರಕಾರಿ ಪ್ರೌಢಶಾಲೆ, ಸಂತಮೇರಿ ಆಂಗ್ಲ ಸಮೂಹ ಮಾಧ್ಯಮ ಶಾಲೆ, ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜ್ಞಾನ ದೀಪ ಕಾರ್ಯಕ್ರಮದಡಿಯಲ್ಲಿ ಬೆಂಚ್-ಡೆಸ್ಕ್ಗಳ ಖರೀದಿಗೆ ಶೇ.೮೦ರಷ್ಟು ಸಹಾಯಧನ ವಿತರಿಸಲಾಯಿತು.
ಜ್ಞಾನ ದೀಪ ಯೋಜನೆಗೆ ಶೇಕಡ ೨೦ ಸಹಾಯ ಧನವನ್ನು ನಾಕೂರು ಶಿರಂಗಾಲ ಗ್ರಾಮದ ದಾನಿಗಳಾದ ಕಾಫಿಬೆಳೆಗಾರರಾದ ಚೆಪ್ಪುಡಿರ ಅಯ್ಯಣ್ಣ ರೂ. ೫,೧೦೦, ಅಯ್ಯಪ್ಪ ೫,೧೦೦, ಪ್ರಿನ್ಸ್ ಚಂಗಪ್ಪ ರೂ. ೫,೧೦೦, ಪೊನ್ನಣ್ಣ ರೂ. ೩,೪೦೦, ಕಾರ್ಯಪ್ಪ ೩,೪೦೦ ರೂ. ಗಳನ್ನು ನೀಡುವುದರ ಮೂಲಕ ಸಹಕರಿಸಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಭವ್ಯ ಹಾಗೂ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಇದ್ದರು.