*ಗೋಣಿಕೊಪ್ಪ, ಫೆ. ೩: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಕಿರುಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಜನಪ್ರಿಯತೆಗೊಳಿಸುವಿಕೆ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಡಿ.ಎ. ಸೋಮಶೇಖರ್ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮೂಲಕ ಸಿರಿಧಾನ್ಯಗಳ ಕೃಷಿಗೆ ಸಾಲ ಸೌಲಭ್ಯ ದೊರೆಯುತ್ತಿದ್ದು, ಇದರ ಲಾಭವನ್ನು ಕೃಷಿಕರು ಪಡೆದುಕೊಳ್ಳಬೇಕಿದೆ. ಸಿರಿಧಾನ್ಯಗಳ ಮೌಲ್ಯವರ್ಧನೆಯಿಂದ ಮಾರುಕಟ್ಟೆ ಸೃಷ್ಠಿಸಿಕೊಂಡು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು. ಭತ್ತ ಕೃಷಿ ಕ್ಷೀಣಿಸುತ್ತಿದ್ದು, ಪರ್ಯಾಯ ಕೃಷಿಯಾಗಿ ಸಿರಿ ಧಾನ್ಯಗಳ ಅವಶ್ಯಕತೆ ಬಗ್ಗೆ ಜಾಗೃತಿ ಮೂಡಿಸಿದರು.

ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ಸಿರಿ ಧಾನ್ಯಗಳ ಮೌಲ್ಯವರ್ಧನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ. ಆರ್ಥಿಕವಾಗಿ ಕೂಡ ಸಬಲರಾಗಲು ಅವಕಾಶ ಇದೆ ಎಂದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಮಾತನಾಡಿ, ಅರಣ್ಯ ಮಹಾವಿದ್ಯಾಲಯ ಕೈಗೊಳ್ಳುವ ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಕ್ರಮದ ಜ್ಞಾನವನ್ನು ರೈತರು ಕೃಷಿಗೆ ಅಳವಡಿಸಿಕೊಳ್ಳಬೇಕಿದೆ. ಇದರಿಂದ ಕೃಷಿಯಲ್ಲಿ ಹೆಚ್ಚು ಸಾಧಿಸಲು ಅವಕಾಶ ಇದೆ ಎಂದರು.

ಸAಪನ್ಮೂಲ ವ್ಯಕ್ತಿಗಳಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಸಾವಯವ ಸಂಘಗಳ ಒಕ್ಕೂಟ ಅಧ್ಯಕ್ಷ ಪಿ. ರಮೇಶ್ ಮಾತನಾಡಿ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.

ಸಿರಿಧಾನ್ಯಗಳ ಬೇಕರಿ ಯೂನಿಟ್ ಮುಖ್ಯಸ್ಥ ಡಾ. ಲಕ್ಷಿö್ಮÃ ಬಳಗನೂರಮಠ ಮತನಾಡಿ, ಸಿರಿಧಾನ್ಯಗಳ ರೊಟ್ಟಿ, ಹಪ್ಪಳ ಮತ್ತು ಚಕ್ಕುಲಿ ವಿವಿಧ ಖಾದ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಿದರು.

ಕಾರ್ಯಕ್ರಮ ಸಂಯೋಜಕ ಡಾ. ಟಿ.ಎಸ್. ಗಣೇಶ ಪ್ರಸಾದ್, ಡಾ. ಎಸ್. ಸತೀಶ್, ಡಾ. ಬಿ. ಎನ್. ಸತೀಶ್ ಇದ್ದರು.