ಸೋಮವಾರಪೇಟೆ, ಫೆ. ೩: ಇಲ್ಲಿನ ಜೇಸಿಐ ಸೋಮವಾರಪೇಟೆ ಪುಷ್ಪಗಿರಿಯ ೫೦ನೇ ಪದಗ್ರಹಣ ಸಮಾರಂಭ ಸಂಕಪ್ಪ ಹಾಲ್‌ನಲ್ಲಿ ನಡೆಯಿತು. ೨೦೨೫ರ ನೂತನ ಸಾಲಿನ ಅಧ್ಯಕ್ಷರಾಗಿ ಜಗದಾಂಬ ಗುರುಪ್ರಸಾದ್ ರವರು ಅಧಿಕಾರ ಸ್ವೀಕರಿಸಿದರು.

ವಲಯ ಅಧ್ಯಕ್ಷ ವಿಜಯ್‌ಕುಮಾರ್ ಅವರು ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಜೇಸಿ ಸಂಸ್ಥೆಯು ಅಂತರರಾಷ್ಟಿçÃಯ ಮಟ್ಟದಲ್ಲಿ ಯುವ ನಾಯಕತ್ವ, ಸಮಾಜಸೇವೆಯ ವೇದಿಕೆಗೆ ಪೂರಕ ವಾತಾವರಣ ಒದಗಿಸುತ್ತಿದೆ. ಭಾರತದಲ್ಲಿ ಜೇಸಿ ಸಂಸ್ಥೆ ಪ್ರಾರಂಭವಾಗಿ ೭೫ ವರ್ಷಗಳಾಗಿದ್ದು, ಸೋಮವಾರಪೇಟೆ ಸಂಸ್ಥೆ ಆರಂಭವಾಗಿ ೫೦ ವರ್ಷಗಳು ಸಂದಿವೆ ಎಂದರು.

ಸುವರ್ಣ ಮಹೋತ್ಸವದ ವರ್ಷದಲ್ಲಿ ಜೇಸಿ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ನೀಡಲಿದೆ. ಜೇಸಿ ಸದಸ್ಯರು ಸಮಾಜಸೇವೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಯುವ ಜನಾಂಗದಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವುದು, ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟçದ ಸಂಪತ್ತಾಗಿ ರೂಪಿಸುವ ನಿಟ್ಟಿನಲ್ಲಿ ಸಂಸ್ಥೆ ಇನ್ನಷ್ಟು ಕಾರ್ಯನಿರ್ವಹಿಸಲಿ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಗದೀಶ್ ರವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿಯಾಗಿ ವಿನುತಾ ಸುದೀಪ್, ಲೇಡಿ ಜೇಸಿ ಚೇರ್‌ಪರ್ಸನ್ ಆಗಿ ಜ್ಯೋತಿ ರಾಜೇಶ್, ಜೆಜೆಸಿ ಚೇರ್ ಪರ್ಸನ್ ಆಗಿ ದಿಶಾ ಗಿರೀಶ್ ಹಾಗೂ ೨೦೨೫ರ ಆಡಳಿತ ಮಂಡಳಿ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭ ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್. ವಸಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.