ಮಡಿಕೇರಿ, ಫೆ. ೩: ಜಿಲ್ಲೆಯಲ್ಲಿ ಎರಡು ಪ್ರಬಲ ಜನಾಂಗಗಳ ನಡುವೆ ಶಕ್ತಿ ಪ್ರದರ್ಶನ ಹಾಗೂ ಬಲಾಬಲ ಕಾರ್ಯ ನಡೆಯಲಿದ್ದು ಇದನ್ನು ತಡೆಗಟ್ಟುವ ಹಾಗೂ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್À ಇಲಾಖೆ ವತಿಯಿಂದ ಇಂದು ಮಡಿಕೇರಿಯಲ್ಲಿ ಪಥ ಸಂಚಲನ ಮೂಲಕ ಜಾಗೃತಿ ಮೂಡಿಸಲಾಯಿತು. ನಿನ್ನೆ ಕುಟ್ಟದಿಂದ ಹೊರಟಿರುವ ಕೊಡವ ಹಾಗೂ ಕೊಡವ ಭಾಷಿಕ ಸಮುದಾಯಗಳ ಜಾಗೃತಿ ಜಾಥಾ ತಾ. ೭ ರಂದು ಮಡಿಕೇರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆತ್ಮಸ್ಥೆöÊರ್ಯ ತುಂಬುವ ಸಲುವಾಗಿ ಪಥ ಸಂಚಲನ ಮೂಲಕ ಜಾಗೃತಿ ಮೂಡಿಸಲಾಯಿತು.