ಸಿದ್ದಾಪುರ, ಫೆ. ೩: ಬಾಡಗ ಬಾಣಂಗಾಲ ಗ್ರಾಮದ ಘಟ್ಟದಳದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು ಎಂ.ಸಿ. ಮುತ್ತಣ್ಣ ಎಂಬವರ ಕಾಫಿ ತೋಟದೊಳಗೆ ಭಾನುವಾರ ರಾತ್ರಿ ದಾಂದಲೆ ನಡೆಸಿವೆ.
ಕಾಫಿ ತೋಟದೊಳಗೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ತುಳಿದು ಹಾನಿಗೊಳಿ ಸಿವೆ. ಫಸಲು ಇರುವ ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದು, ಕಾಫಿ ಗಿಡಗಳನ್ನು ನಾಶಗೊಳಿಸಿರುತ್ತವೆ. ಮುತ್ತಣ್ಣನವರ ಕಾಫಿ ತೋಟದಲ್ಲಿ ಕಳೆದ ಒಂದು ವಾರಗ ಳಿಂದ ನಿರಂತರವಾಗಿ ಕಾಡಾನೆಗಳು ಬೀಡು ಬಿಟ್ಟು ದಾಂದಲೆ ನಡೆಸುತ್ತಿವೆ. ಕಾಡಾನೆ ಗಳ ಉಪಟಳದಿಂದಾಗಿ ಆತಂಕದಿAದ ಕಾರ್ಮಿಕರು ಕಾಫಿ ತೋಟದೊಳಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ. ಇದೀಗ ಕಾಫಿ ಕೊಯ್ಲು ಕೆಲಸ ನಡೆಯುತ್ತಿದ್ದು ಕಾರ್ಮಿಕರು ಭಯಬೀತರಾಗಿದ್ದು, ಕಾಫಿ ಕೊಯ್ಲು ಕೆಲಸ ವಿಳಂಬವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಶಾಶ್ವತ ಯೋಜನೆ ಯನ್ನು ರೂಪಿಸಬೇಕೆಂದು ಹಾಗೂ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಇಲಾಖೆ ವತಿಯಿಂದ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.