ಮಡಿಕೇರಿ, ಫೆ. ೩ : ೧೯೫೬ರಲ್ಲಿ ಸಹಕಾರ ಕಾಯ್ದೆಯನ್ವಯ ಕಾಫಿ ಬೆಳೆಗಾರರ ಹಿತಚಿಂತನೆಯೊAದಿಗೆ ಕೆಲವು ಸ್ವಾರ್ಥರಹಿತ ಮುಂದಾಳುಗಳ ಕನಸ್ಸಿನಂತೆ ಅಸ್ತಿತ್ವಕ್ಕೆ ಬಂದಿರುವ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. ಕೆಲವು ದಶಕಗಳ ಹಿಂದೆ ಉತ್ತಂಗದಲ್ಲಿದ್ದ ಈ ಸಂಘ ನಂತರದಲ್ಲಿ ಕಾರಣಾಂತರಗಳಿAದ ಒಂದು ರೀತಿಯಲ್ಲಿ ತನ್ನ ಬೆಳೆವಣಿಗೆಯಿಂದ ಕುಂಠಿತವಾಗಿತ್ತು.
ಆದರೂ ಹಿರಿಯರ ಪರಿಶ್ರಮದೊಂದಿಗೆ ಕಾರ್ಯಾರಂಭ ಗೊಂಡಿರುವ ಈ ಸಂಘ ಕೆಲವಾರು ಕಾರ್ಯಚಟುವಟಿಕೆಯೊಂದಿಗೆ ನಷ್ಟದ ನಡುವೆಯೂ ಒಂದಷ್ಟು ಪ್ರಗತಿಯನ್ನು ಕಾಣುತ್ತಾ ಬರುತ್ತಿರುವುದು ಇತ್ತೀಚಿನ ವಿದ್ಯಮಾನವಾಗಿದೆ.
ದಿವಂಗತ ಮನೆಯಪಂಡ ಬೆಳ್ಯಪ್ಪ ಅವರು ಈ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ನಂತರದಲ್ಲಿ ಸಂಘಕ್ಕೆ ಹುಣಸೂರು ಆಸ್ತಿ ಸೇರ್ಪಡೆಗೆ ದಿವಂಗತ ಎ.ಎನ್. ಸೋಮಯ್ಯ ಅವರು ಮತ್ತೊಬ್ಬ ರೂವಾರಿ ಯಾಗಿದ್ದಾರೆ. ಮಡಿಕೇರಿಯಲ್ಲಿ ಮುಖ್ಯಕಚೇರಿ ಹೊಂದಿದ್ದು, ಹುಣಸೂರು, ಹೆಬ್ಬಾಲೆ, ಅಮ್ಮತ್ತಿ, ಮಾದಾಪುರ, ಚೇರಂಬಾಣೆ, ಕಕ್ಕಬೆ, ಕಾಕೋಟುಪರಂಬುವಿನಲ್ಲಿ ಸಂಘ ತನ್ನ ಆಸ್ತಿ ಹೊಂದಿದ್ದು, ಕಾರ್ಯಚಟುವಟಿಕೆ ಯಲ್ಲಿದೆ. ಇದೀಗ ಈ ಸಂಘದ ಹಾಲಿ ಅಧ್ಯಕ್ಷರಾಗಿರುವ ಎಂ.ಬಿ. ದೇವಯ್ಯ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಮುಂದಿನ ಐದು ವರ್ಷಗಳ ಅಧಿಕಾರಕ್ಕಾಗಿ ಚುನಾವಣೆ ನಿಗದಿಯಾಗಿದೆ.
ಪ್ರಸ್ತುತ ಕೊಡಗಿನಲ್ಲಿ ಕಾಫಿ ಬೆಳೆಗಾರರು ಹತ್ತು - ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೊಮ್ಮೆ ಬೆಳೆಗಾರರಿಗೆ ಅದರಲ್ಲೂ ಸಣ್ಣ ಬೆಳೆಗಾರರಿಗೆ ಭಾರೀ ಪ್ರಯೋಜನಕಾರಿಯಾಗಿದ್ದ ಈ ಸಂಘ ನಂತರದಲ್ಲಿ ತನ್ನ ವೇಗ ಕಳೆದುಕೊಂಡಿತ್ತು. ಇದೀಗ ಜಿಲ್ಲೆಯ ಪ್ರಮುಖ ಬೆಳೆಗಾರರ ಸಂಘವಾಗಿರುವ ಈ ಸಂಘವನ್ನು ಹೊಸ ಹೊಸ ಯೋಜನೆಗಳು, ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಮತ್ತಷ್ಟು ಪುನಶ್ಚೇತನಗೊಳಿಸಿದಲ್ಲಿ ಇದು ಬೆಳೆಗಾರರಿಗೆ ವರದಾನ ವಾಗಲಿದೆ ಎಂಬ ಆಶಾಭಾವನೆ ಜಿಲ್ಲೆಯ ಕಾಫಿ ಬೆಳೆಗಾರರಲ್ಲಿದೆ. ಇದರ ನಡುವೆಯೇ ಇದೀಗ ಸಂಘಕ್ಕೆ ಚುನಾವಣೆ ಎದುರಾಗಿದ್ದು, ಚುನಾವಣಾ ಬಿರುಸು ಆರಂಭವಾಗಿದೆ.
ಫೆ. ೧೬ ರಂದು ಚುನಾವಣೆ : ೧೫ ನಿರ್ದೇಶಕ ಸ್ಥಾನ
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ೩ಆರನೇ ಪುಟಕ್ಕೆ (ಮೊದಲ ಪುಟದಿಂದ) ನೂತನ ಆಡಳಿತ ಮಂಡಳಿಗೆ ಫೆ. ೧೬ ರಂದು ಚುನಾವಣೆ ನಿಗದಿಯಾಗಿದೆ. ಒಟ್ಟು ೧೫ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಚುನಾವಣಾ ಪ್ರಕ್ರಿಯೆ ಈಗಾಗಲೇ ಆರಂಭಗೊAಡಿದೆ. ೯ ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಜಾತಿ ಒಂದು, ಪರಿಶಿಷ್ಟ ಪಂಗಡ ಒಂದು, ಮಹಿಳಾ ಮೀಸಲು ೨ ಹಾಗೂ ಪ್ರವರ್ಗ ಎ ಯಿಂದ ೨ ಸ್ಥಾನ ಸೇರಿ ಒಟ್ಟು ೧೫ ನಿರ್ದೇಶಕ ಸ್ಥಾನವಿದೆ.
ತಾಲೂಕುವಾರು
ಮಡಿಕೇರಿ ತಾಲೂಕಿನ ಸದಸ್ಯರಿಂದ ೩ ಸಾಮಾನ್ಯ ನಿರ್ದೇಶಕ ಸ್ಥಾನಕ್ಕೆ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಿಂದ ೪ ಸ್ಥಾನ ಹಾಗೂ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಸದಸ್ಯರಿಂದ ೨ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದೆ. ಇತರ ನಿರ್ದೇಶಕ ಸ್ಥಾನಕ್ಕೆ ಜಿಲ್ಲಾ ವ್ಯಾಪ್ತಿಯ ಸದಸ್ಯರಿಂದ ಆಯ್ಕೆಯಾಗಬೇಕಿದೆ.
ಸೋಮವಾರದಿಂದಲೇ ನಾಮಪತ್ರ
ಚುನಾವಣೆಗೆ ಸಂಬAಧಿಸಿದAತೆ ಚುನಾವಣಾ ಅಧಿಕಾರಿಯಾಗಿರುವ ಶೈಲಜಾ ಅವರು ಈಗಾಗಲೇ ಪ್ರಕಟಣೆ ಹೊರಡಿಸಿದ್ದಾರೆ. ಫೆ. ೩ ರಿಂದ (ಸೋಮವಾರದಿಂದ) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊAಡಿದೆ. ತಾ. ೩ ರಿಂದ ೮ರ ತನಕ ಬೆಳಿಗ್ಗೆ ೧೧ ರಿಂದ ಅಪರಾಹ್ನ ೩ ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ತಾ. ೯ ರಂದು ನಾಮಪತ್ರ ಪರಿಶೀಲನೆ, ತಾ. ೧೦ ರಂದು ೩ ಗಂಟೆಯ ಒಳಗೆ ಹಿಂಪಡೆಯಲು ಅವಕಾಶವಿದ್ದು, ನಂತರ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ.
ತಾ. ೧೬ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ಗಂಟೆಯ ತನಕ ಮಡಿಕೇರಿಯ ಬಾಲಭವನ ಕಟ್ಟಡದಲ್ಲಿ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ. ಸಂಘದಲ್ಲಿ ಹಲವು ಸದಸ್ಯರಿದ್ದರೂ ಈ ಚುನಾವಣೆಯಲ್ಲಿ ಒಟ್ಟು ೪೮೭ ಮಂದಿಗೆ ಮತದಾನದ ಅವಕಾಶವಿದೆ. ಮಡಿಕೇರಿ ತಾಲೂಕಿನಲ್ಲಿ ೨೨೧, ವೀರಾಜಪೇಟೆ - ಪೊನ್ನಂಪೇಟೆ ೧೪೭, ಸೋಮವಾರಪೇಟೆ ೧೧೯ ಮಂದಿ ಅಧಿಕೃತ ಮತದಾರರಾಗಿದ್ದಾರೆ.