ಗೋಣಿಕೊಪ್ಪಲು, ಫೆ.೩: ಕೊಡವಾಮೆ ಬಾಳೋ ಪಾದಯಾತ್ರೆಯ ಎರಡನೇ ದಿನವೂ ಜನಬೆಂಬಲದೊAದಿಗೆ ಯಶಸ್ಸು ಕಂಡಿತು. ಈ ಹಿನ್ನಲೆಯಲ್ಲಿ ಸಂಘಟಕರು ಮತ್ತಷ್ಟು ಪ್ರೋತ್ಸಾಹಗೊಂಡಿದ್ದಾರೆ. ಮುಂದಿನ ದಿನದಲ್ಲೂ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ವ್ಯಕ್ತಗೊಂಡಿದೆ.

ತಾವು ನಿರೀಕ್ಷಿಸದ ಮಟ್ಟದಲ್ಲಿ ರಸ್ತೆಯ ಉದ್ದಗಲಕ್ಕೂ ಕೊಡವಾಮೆ ಬಾಳೋ ಪಾದಯಾತ್ರೆಗೆ ಅಭೂತಪೂರ್ವ ಸ್ವಾಗತ ದೊರೆಯುತ್ತಿದ್ದು ಮಹಿಳೆಯರು ತಳಿಯತಕ್ಕಿ ಬೊಳ್ಚ ಹಿಡಿದು ಸ್ವಾಗತ ನೀಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರು, ಭಾಗವಹಿಸುತ್ತಿದ್ದಾರೆ. ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉರಿ ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

೨ನೇ ದಿನದ ಕೊಡವಾಮೆ ಬಾಳೋ ಪಾದಯಾತ್ರೆಯು ಮುಂಜಾನೆ ೧೦ ಗಂಟೆಗೆ ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿರುವ ಕೊಡವ ಸಮಾಜದ ಆವರಣದಿಂದ ಹಿರಿಯರ ಆಶೀರ್ವಾದದೊಂದಿಗೆ ಆರಂಭವಾಯಿತು. ಮಾರ್ಗದುದ್ದಕ್ಕೂ ಸಿಗುವ ಗ್ರಾಮದಲ್ಲಿ ಕೊಡವ ಸಮುದಾಯ ಬಾಂಧವರು ಪಾದಯಾತ್ರೆಯನ್ನು ಬರಮಾಡಿಕೊಳ್ಳುವ ಮೂಲಕ ಮೆರವಣಿಗೆಯಲ್ಲಿ ಜೊತೆಗೂಡಿ ಹೆಜ್ಜೆ ಹಾಕಿದರು.

ಕೊಡವಾಮೆ ಬಾಳೋ ಪಾದಯಾತ್ರೆಯಲ್ಲಿ ಕೊಡವ ಹಾಗೂ ಕೊಡವ ಭಾಷಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೊಡವ ಸಂಸ್ಕೃತಿಯ ಉಳಿವು ಅಸ್ತಿತ್ವದ ವಿಚಾರವನ್ನು ಮುಂದಿರಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಅಪಾರ ಜನಸ್ತೋಮ, ಸಾಮೂಹಿಕ ಪಾಲ್ಗೊಳ್ಳುವಿಕೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು ಹೊಸ ಹುರುಪಿನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಕೊಡವಾಮೆ ಬಾಳೋ ಪಾದಯಾತ್ರೆಯನ್ನು ಸ್ವಾಗತಿಸಲು ಗ್ರಾಮ ಗ್ರಾಮಗಳಲ್ಲಿ ಬ್ಯಾನರ್‌ಗಳು, ಸ್ವಾಗತ ಕೋರುತ್ತಿವೆ. ಹಲವೆಡೆ ರೆಡ್ ಕಾರ್ಪೆಟ್‌ಗಳನ್ನು ಹಾಸಿ ಪಾದಯಾತ್ರೆಯನ್ನು ವಿಶೇಷ ರೀತಿಯಲ್ಲಿ ಬರ ಮಾಡಿಕೊಳ್ಳಲಾಗುತ್ತಿದೆ. ಸೂಕ್ತ ಬಂದೋಬಸ್ತ್ ಹಿನ್ನಲೆಯಲ್ಲಿ ನೂರಾರು ಪೊಲೀಸರು ಪಾದಯಾತ್ರೆಯೊಂದಿಗೆ ನಡೆದುಕೊಂಡೆ ಬರುತ್ತಿದ್ದಾರೆ. ಮೆರವಣಿಗೆಯಲ್ಲಿ ಬರುವ ಸಾವಿರಾರು ಮಂದಿಗೆ ಹಲವೆಡೆ ಮಜ್ಜಿಗೆ, ಶರಬತ್ತ್, ನೀರು ಹಾಗೂ ಹಣ್ಣುಗಳನ್ನು ಸ್ವಯಂ ಪ್ರೇರಿತರಾಗಿ ವಿತರಿಸುತ್ತಿದ್ದಾರೆ

೨ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಹುದಿಕೇರಿಯ ಕೊಡವ ಸಮಾಜದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಡಿವೈಎಸ್ಪಿ ಮಹೇಶ್‌ಕುಮಾರ್ ಖುದ್ದಾಗಿ ಬಂದೋಬಸ್ತ್ ಕಾರ್ಯದ ಉಸ್ತುವಾರಿ ವಹಿಸಿದ್ದರು. ವಾಹನಗಳ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿದರು.

ವೀಲ್ ಚೇರ್‌ನಲ್ಲಿ ಆಗಮಿಸಿದ ಹಿರಿಯ ಮಹಿಳೆ : ಹೈಸೋಡ್ಲೂರು ಗ್ರಾಮದ ಬಯವಂಡ ಸರಸ್ವತಿ ಪೂವಯ್ಯ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ತಮ್ಮ ೮೬ ವಯಸ್ಸಿನಲ್ಲಿ ನಡೆಯಲಾಗದಿದ್ದರೂ ವೀಲ್ ಚೇರ್‌ನಲ್ಲಿ ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ಬೆಳಿಗ್ಗೆ ತಾವಳÀಗೇರಿಯ ಮಚ್ಚಮಾಡ ಐನ್ ಮನೆಯಲ್ಲಿ ಮಚ್ಚಮಾಡ ಕುಟುಂಬಸ್ಥರು ಪಾದಯಾತ್ರೆಯನ್ನು ಸ್ವಾಗತಿಸಿದರು. ಐತಿಹಾಸಿಕ ತಾವಳಗೇರಿಯ ಪೆರುಮಾಳ್ ಮಂದಿರದಲ್ಲಿರುವ ಪೆರುಮಾಳ್ ಅಚ್ಚ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಪಾದಯಾತ್ರೆಯ ಆರಂಭದಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್‌ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಬೆಳ್ಳೂರು ಸಮೀಪದ ಶ್ರೀ ತುಪ್ಪ ನಾಣಿ ಭಗವತಿ ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯಿAದ ಪಾದಯಾತ್ರೆಯನ್ನು ಬರಮಾಡಿಕೊಳ್ಳಲಾಯಿತು. ತಂಪು ಪಾನೀಯ, ಹಣ್ಣು ಹಂಪಲು ವಿತರಿಸಲಾಯಿತು.

ಹೈಸೊಡ್ಲೂರು ಸಮೀಪದ ಮಹಾದೇವರ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಸುತ್ತಮುತ್ತಲಿನ ಕೊಡವಾಭಿಮಾನಿಗಳು ಪಕ್ಷ ಬೇಧ ಮರೆತು ಪಾದಯಾತ್ರೆಯನ್ನು ಸಾಂಪ್ರದಾಯಿಕವಾಗಿ ಬರಮಾಡಿ ಕೊಂಡರು. ಹುದಿಕೇರಿ ಬಳಿಯ ಪೆಟ್ರೋಲ್ ಬಂಕ್ ಬಳಿ ರೆಡ್ ಕಾರ್ಪೆಟ್ ಹಾಸುವ ಮೂಲಕ ಮೆರವಣಿಗೆಯನ್ನು ಬರಮಾಡಿ ಕೊಳ್ಳಲಾಯಿತು.

ನಡಿಕೇರಿ ಗ್ರಾಮದಲ್ಲಿ ತಲಬಲೇಶ್ವರ ಯುವಕ ಸಂಘ, ನಡಿಕೇರಿ ಗ್ರಾಮಸ್ಥರು ಕೊಡವಾಮೇ ಬಾಳೋ ಪಾದಯಾತ್ರೆ ಸ್ವಾಗತಿಸಿ ಮಜ್ಜಿಗೆ ವಿತರಣೆ ಮಾಡಿದರು. ಬೇಗೂರು ಹಾಗೂ ಚೇನಿವಾಡ ಗ್ರಾಮಸ್ಥರು ರಸ್ತೆಗೆ ರೆಡ್ ಕಾರ್ಪೆಟ್ ಹಾಸುವ ಮೂಲಕ ಮೆರವಣಿಗೆಗೆ ಸ್ವಾಗತ ಕೋರಿದರು.

ಮಾಪಿಳ್ಳೆತೋಡು ಬಳಿ ಪಾದಯಾತ್ರೆಗೆ ಆಲೀರ ಕುಟುಂಬಸ್ಥರಿAದ ಸ್ವಾಗತ ಕೋರಲಾಯಿತು. ಈ ಸಂದರ್ಭ ಕಾಫಿ ಹಾಗೂ ಟೀ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊನ್ನಂಪೇಟೆ ಕಾನೂನು ಜಂಕ್ಷನ್‌ನಲ್ಲಿ ಪಾದಯಾತ್ರೆಯನ್ನು ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕೊಡವ ಹಿತರಕ್ಷಣಾ ಬಳಗದಿಂದ ಬರಮಾಡಿಕೊಳ್ಳಲಾಯಿತು. ಬಾಳೆ ತೋರಣದ ವ್ಯವಸ್ಥೆ ಕಾನೂರು ಜಂಕ್ಷನ್‌ನಿAದ ಕಂಡು ಬಂತು.

ತಳಿಯತಕ್ಕಿ ಬೊಳಕ್ ಹಿಡಿದು ಮಹಿಳೆಯರು ಮುನ್ನಡೆದರೆ, ಸಾಂಪ್ರದಾಯಿಕ ಧಿರಿಸಿನಲ್ಲಿದ್ದ ಪುರುಷರು - ಮಹಿಳೆಯರು ಪಾದಯಾತ್ರೆಯಲ್ಲಿ ಸಾಗಿ ಬಂದವರನ್ನು ಸ್ವಾಗತಿಸಿ ಕೊಡವ ಸಮಾಜಕ್ಕೆ ಕರೆದೊಯ್ದರು. ಅಲ್ಲಿ ಸಂಜೆಯ ಕಾಫಿ - ತಿಂಡಿಯೊAದಿಗೆ ಎರಡನೇ ದಿನದ ಕಾರ್ಯಕ್ರಮ ಮುಕ್ತಾಯಗೊಂಡಿತು. ತಾ. ೪ ರಂದು (ಇಂದು) ಪೊನ್ನಂಪೇಟೆಯಿAದ ಬಿಟ್ಟಂಗಾಲದತನಕ ಯಾತ್ರೆ ಸಾಗಲಿದೆ. ನಡು - ನಡುವೆ ಸ್ವಾಗತ, ಉಪಚಾರವಿದೆ. ಸಂಜೆ ಹೆಗ್ಗಡೆ ಸಮಾಜದಲ್ಲಿ ಹೆಗ್ಡೆ ಸಮಾಜದಿಂದ ಸ್ವಾಗತ ಕೋರಲಾಗುವುದು ಎಂದು ಸಮಾಜದವರು ತಿಳಿಸಿದ್ದಾರೆ.

- ಹೆಚ್.ಕೆ. ಜಗದೀಶ್