ಕಡAಗ, ಫೆ. ೩: ಭಾನುವಾರ ನಡೆದ ಸಿಆರ್‌ಜಿ ಪ್ರಾಯೋಜಕತ್ವದ ಕಡಂಗ ಪ್ರೀಮಿಯರ್ ಲೀಗ್ ಕಾಲ್ಚೆಂಡು ಕ್ರೀಡಾಕೂಟವು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದವು. ಉದ್ಘಾಟನೆಯನ್ನು ಸ್ಥಳೀಯ ಕೋಡಿರ ಡಾಲಿ ಅವರು ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಪತ್ರಕರ್ತ ನೌಫಲ್ ಕಡಂಗ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರನ್ನು ಒಳಗೊಂಡ ಇಂತಹ ಕ್ರೀಡೆಗಳಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳಿಗೆ ಸಹಕಾರಿಯಾಗಿವೆ ಮುಂದಿನ ದಿನಗಳಲ್ಲೂ ಇಂತಹ ಕ್ರೀಡೆಗಳು ಹೆಚ್ಚು ಹೆಚ್ಚು ನೆಡೆಯಲಿ ಎಂದರು.
ಬೆಳಿಗ್ಗೆ ೧೧ ಗಂಟೆಯಿAದ ಕಡಂಗ ಪಟ್ಟಣದಲ್ಲಿ ಕ್ರೀಡಾಪಟುಗಳ ಮೆರವಣಿಗೆ ಹಾಗೂ ಪಟಾಕಿಗಳ ಸಿಡಿಸುವಿಕೆಯಿಂದ ಪ್ರಾರಂಭಗೊAಡ ಪಂದ್ಯಾಟವು ರೋಮಾಂಚನವಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಈ ವರ್ಷದ ಆಯೋಜಕರಾದ ಕೋಚೇರಿ ಪ್ರಮುಖರಾದ ಸಾಬೀರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಿ ಆರ್ ಜಿ ಮಾಲೀಕರಾದ ಸಭಾದ್ ಸಿ ಎಂ, ರಫೀಕ್ ಅರಫಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಿರಣ್ ಕಾರ್ಯಪ್ಪ, ಕುಲ್ಲಚಂಡ ಟೈನಿ ಈರಪ್ಪ, ಕೊಡಿರ ಪ್ರಸನ್ನ ತಮ್ಮಯ್ಯ, ಐತಿಚಂಡ ಪ್ರಕಾಶ್, ಮೇದುರ ಗಣು ಕುಶಾಲಪ್ಪ, ಪತ್ರಕರ್ತ ಅಶ್ರಫ್ ಸಿ ಎ, ರಿಜ್ವಾನ್, ಶಿದಾ, ಉಸ್ಮಾನ್ ಎವರ್ ಗ್ರೀನ್, ನಿವೃತ ಸೈನಿಕ ಸಲಾಂ, ರಜಾಕ್ ಸಿ ಎ, ಜುಲೈ ಸಿ ಎ, ಅಬೂಬಕರ್ ಉಪಸ್ಥಿತರಿದ್ದರು.
ಫೈನಲ್ ಪಂದ್ಯಾಟದಲ್ಲಿ ಬರಗೂರು ಎಫ್ ಸಿ ತಂಡವನ್ನು ೧-೦ ಅಂತರದಲ್ಲಿ ಮಣಿಸಿ ಅಮಿಗೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಪAದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಮಿಗೋಸ್ ತಂಡದ ಫಯಾಜ್ ಪಡೆದುಕೊಂಡರೆ ಉತ್ತಮ ಡಿಫೆಂಡರ್ ಆಟಗಾರನಾಗಿ ಬರಗೂರು ತಂಡದ ಸಜೀರ್ ಮತ್ತು ಉತ್ತಮ ಗೋಲ್ ಕೀಪರ್ ಆಗಿ ಆಫ್ಸಲ್ ಅಚ್ಚು ಪ್ರಶಸ್ತಿ ಪಡೆದರು. ಕ್ರೀಡಾಕೂಟದ ತೀರ್ಪುಗಾರಿಕೆಯನ್ನು ಸಂಪತ್ ಕುಮಾರ್ ಮತ್ತು ಅಶ್ವಾನ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಆಯೋಜಕರಾದ ಅನ್ಸಾರ್ ಟೆಕ್ಸ, ಸತ್ತರ್, ಸಂಶೀರ್, ಲತೀಫ್, ರಾಶಿ, ಸಹದ್ ಉಪಸ್ಥಿತರಿದ್ದರು. ವೀಕ್ಷಕ ವಿವರಣೆಯನ್ನು ಅಷ್ಕರ್ ಕಥರ್ ನಿರ್ವಹಿಸಿದರು.