ಕಣಿವೆ, ಫೆ. ೩: ಕುಶಾಲನಗರ-ಸಿದ್ದಾಪುರ ಮಾರ್ಗದ ಬಾಳುಗೋಡು ಎಂಬಲ್ಲಿ ನಿರ್ಮಾಣವಾಗಿರುವ ಖಾಸಗಿ ರೆಸಾರ್ಟ್ನೊಳಗೆ ಸಂಗ್ರಹವಾಗುವ ಕಲುಷಿತ ಹಾಗೂ ತ್ಯಾಜ್ಯ ನೀರನ್ನು ನೇರವಾಗಿ ಹಳ್ಳದ ಮೂಲಕ ಕಾವೇರಿ ನದಿಗೆ ಹರಿಯಬಿಡಲಾಗುತ್ತಿದೆ. ಇದಕ್ಕಾಗಿ ರಾತ್ರೋರಾತ್ರಿ ಹೆದ್ದಾರಿ ಬದಿಯಲ್ಲಿಯೇ ಬೃಹತ್ ಗಾತ್ರದ ಸಿಮೆಂಟ್ ಪೈಪುಗಳನ್ನು ಅಳವಡಿ ಸುತ್ತಿರುವ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದು ಕಾಮಗಾರಿಯನ್ನು ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ.

ಸ್ಥಳಕ್ಕೆ ಲೋಕೋಪಯೋಗಿ ಅಭಿಯಂತರ ಹಾಗೂ ಗುಡ್ಡೆಹೊಸೂರು ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ರೆಸಾರ್ಟ್ ಮಾಲೀಕರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ರೆಸಾರ್ಟ್ಗೆ ಹೊಂದಿಕೊAಡAತೆ ಗ್ರಾಮದ ಬಯಲು ಬಸವೇಶ್ವರ ದೇಗುಲವೂ ಇದ್ದೂ ದೇವಾಲಯದ ಮೂರ್ತಿಯ ಸನಿಹವೇ ಕಲುಷಿತ ನೀರಿನ ಪೈಪ್ ಅಳವಡಿಸುತ್ತಿದ್ದರೂ ಕೂಡ ದೇವಾಲಯ ಸಮಿತಿಯವರು ಚಕಾರವೆತ್ತದೇ ಮೌನವಹಿಸಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.