ವೀರಾಜಪೇಟೆ, ಫೆ. ೨: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಇವರ ವತಿಯಿಂದ ಪರಿಸರ ಸಂರಕ್ಷಣಾ ಜಾಥಾ ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನದಿಂದ ತಾಲೂಕು ಮೈದಾನದವರೆಗೆ ನಡೆಯಿತು. ವೀರಾಜಪೇಟೆಯ ಪಕ್ಷಿತಜ್ಞ ಡಾ. ನರಸಿಂಹನ್ ಹಾಗೂ ಪುರಸಭೆ ಸದಸ್ಯ ರಾಜೇಶ್ ಪದ್ಮನಾಭ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾದ ಅಂಗವಾಗಿ ನಗರದ ಗಡಿಯಾರ ಕಂಬದ ಬಳಿ ರೋಲಿಕ್ಸ್ ಆಂಗ್ಲ ಮಾಧÀ್ಯಮ ಶಾಲೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಬೀದಿನಾಟಕ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ಪುರಸಭೆ ವತಿಯಿಂದ ಜಾಥಾದಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳಿಗೆ ಪುರಸಭೆ ಅಧ್ಯಕೆÀ್ಷ ದೇಚಮ್ಮ ಕಾಳಪ್ಪ ಹಾಗೂ ಪುರಸಭೆ ಸಿಬ್ಬಂದಿಗಳು ಸಿಹಿ ಹಂಚಿದರು. ಬಳಿಕ ಮಾತನಾಡಿದ ಪುರಸಭೆ ಅಧ್ಯಕೆÀ್ಷ ದೇಚಮ್ಮ ಕಾಳಪ್ಪ, ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಪರಿಸರ ಸಂರಕ್ಷಣಾ ಜಾಥಾ ಮಾಡುವ ಮೂಲಕ ವಿಭಿನ್ನ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಈಗಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರಿಸರ ಸಂರಕ್ಷಣೆ ಮಾಡುವಲ್ಲಿ ಮುಂದಾಗಬೇಕು. ಪ್ರತಿಯೊಬ್ಬರೂ ಸಹ ಪೌರ ಕಾರ್ಮಿಕರ ಜೊತೆ ಕೈ ಜೋಡಿಸಬೇಕು. ಮನೆಯಿಂದ ಕಸವನ್ನು ಒಣ ಕಸ, ಹಸಿ ಕಸವನ್ನಾಗಿ ವಿಗಂಡಣೆ ಮಾಡಿ ತ್ಯಾಜ್ಯ ವಾಹನಕ್ಕೆ ಹಾಕಬೇಕು. ನಗರದ ಸ್ವಚ್ಚತೆ ಬಗ್ಗೆ ಪುರಸಭೆ ಜೊತೆ ಕೈಜೋಡಿಬೇಕು ಎಂದು ತಿಳಿಸಿದರು.
ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಮುನೀರ್ ಎಂ.ಎ. ಮಾತನಾಡಿ, ವಿದೇಶಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಇರುವ ಕಾಳಜಿ ನಮಗೂ ಸಹ ಇರಬೇಕು, ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದರು.
ಜಾಥಾವು ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ತಾಲೂಕು ಕಚೇರಿಗೆ ತೆರಳಿ ತಾಲೂಕು ತಹಶೀಲ್ದಾರ್ ರಾಮಚಂದ್ರ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಮನವಿ ಪತ್ರದ ಬಗ್ಗೆ ಸಂಸ್ಥೆಯ ಸಂಚಾಲಕ ಶಶಿ ಅಚ್ಚಪ್ಪ ವಿವರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಾಮಚಂದ್ರ, ಪರಿಸರ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಮನವಿ ಪತ್ರವನ್ನು ಸಂಬAಧಪಟ್ಟ ಇಲಾಖೆಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.
ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭ ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಮಾಚಯ್ಯ, ಉಪಾಧ್ಯಕ್ಷ ಕರಣ್ ಕುಮಾರ್ ಶೆಟ್ಟಿ, ಗೌರವ ಕಾರ್ಯದರ್ಶಿ ಸುನಿತ, ಖಜಾಂಚಿ ವಿನೋದ್ ಕುಮಾರ್, ಸಂಘದ ಸದಸ್ಯರಾದ ಪಾಲೇಕಂಡ ರತ್ನ ಕರುಂಬಯ್ಯ, ಶರಣು ನಂಜಪ್ಪ, ಸಂತೋಷ್, ಸಾಜು, ಪುರಸಭೆ ನಾಮ ನಿರ್ದೇಶನ ಸದಸ್ಯ ಅತೀಫ್ ಮನ್ನ ಹಾಜರಿದ್ದರು.
ಜಾಥಾದಲ್ಲಿ ಪ್ರಗತಿ ವಿದ್ಯಾ ಸಂಸ್ಥೆ, ರೋಲಿಕ್ಸ್ ಆಂಗ್ಲ ಮಾದ್ಯಮ ಶಾಲೆ, ಕೂರ್ಗ್ ವ್ಯಾಲಿ ಶಾಲೆ, ರೋಟರಿ ಶಾಲೆ, ತ್ರಿವೇಣಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.