ಮಡಿಕೇರಿ, ಫೆ. ೨: ಗಾಂಜಾ ಮಾರಾಟ ಪ್ರಕರ ಣಕ್ಕೆ ಸಂಬAಧಿಸಿ ದಂತೆ ವೀರಾಜ ಪೇಟೆ ಪೊಲೀಸರು ಯುವಕನೋರ್ವ ನನ್ನು ಬಂಧಿಸಿದ್ದಾರೆ.
ವೀರಾಜಪೇಟೆಯ ಪೆರುಂಬಾಡಿ ಜಂಕ್ಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಕೇರಳ ರಾಜ್ಯ ಕಣ್ಣೂರು ಜಿಲ್ಲೆ ಮೂಲದ ನಿಧಿನ್ (೨೮) ಎಂಬಾತನನ್ನು ೩ ಕೆ.ಜಿ. ೯೦ ಗ್ರಾಂ. ಗಾಂಜಾದೊAದಿಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಎಸ್‌ಪಿ ಕೆ. ರಾಮರಾಜನ್ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಮಹೇಶ್‌ಕುಮಾರ್, ವೀರಾಜಪೇಟೆ ಸಿಐ ಅನೂಪ್ ಮಾದಪ್ಪ ಹಾಗೂ ವೀರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.v