ಗೋಣಿಕೊಪ್ಪಲು, ಫೆ. ೨: ಪೊನ್ನಂಪೇಟೆ ತಾಲೂಕಿನ ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪ ರೇಟಿವ್ ಸೊಸೈಟಿ ಗೋಣಿಕೊಪ್ಪಲು ಇದರ ಅಧ್ಯಕ್ಷರಾಗಿ ಕಿರಿಯಮಾಡ ಅರುಣ್ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ಕಡೇಮಾಡ ಸುನಿಲ್ ಮಾದಪ್ಪ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಗೋಣಿಕೊಪ್ಪಲುವಿನ ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ೧೫ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಯಾಗಿದ್ದು, ಸಂಘದ ಆವರಣದಲ್ಲಿ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯನ್ನು ಚುಣಾವಣಾ ಅಧಿಕಾರಿ ಆಶಾ ನೆರವೇರಿಸಿದರು. ನಾಲ್ಕನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕಿರಿಯಮಾಡ ಅರುಣ್ ಪೂಣಚ್ಚ ಮಾತನಾಡಿ, ಸದಸ್ಯರ ಹಿತವನ್ನು ಕಾಪಾಡುವುದು, ಸಂಘವನ್ನು ಮತ್ತಷ್ಟು ಬಲಿಷ್ಟವಾಗಿ ಬೆಳೆಸುವುದು, ಲಾಭಾಂಶ ದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕಡೇಮಾಡ ಸುನಿಲ್ ಮಾದಪ್ಪ ಮಾತನಾಡಿ, ೨೫ನೇ ವರ್ಷದ ಸವಿ ನೆನಪಿನಲ್ಲಿ ಅನೇಕ ಕಾರ್ಯ ಕ್ರಮಗಳು, ಅಭಿವೃದ್ಧಿ ಕಾರ್ಯಗಳು ಸಂಸ್ಥೆ ವತಿಯಿಂದ ನಡೆಯಲಿವೆ ಎಂದರು. ಸಂಘದ ಹಿರಿಯ ನಿರ್ದೇಶಕರುಗಳಾದ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಎನ್. ಪ್ರಕಾಶ್, ಎ.ಜೆ. ಬಾಬು, ಚೇಂದAಡ ಸುಮಿ ಸುಬ್ಬಯ್ಯ, ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಸಭೆಯಲ್ಲಿ ಉಪಯುಕ್ತ ಮಾಹಿತಿ ವಿನಿಮಯ ಮಾಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರು ಗಳಾದ ಹೆಚ್.ವಿ. ಜಗದೀಶ್, ನಾಮೆರ ದೇವಯ್ಯ, ಸಿ.ಡಿ. ಮಾದಪ್ಪ, ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಪಿ. ರಾಜಶೇಖರ್, ಎ.ಕೆ. ಉಮ್ಮರ್, ಕೆ.ಬಿ. ಪ್ರತಾಪ್, ಹೆಚ್.ಎನ್. ಮುರುಗನ್, ಸಂಸ್ಥೆಯ ಸಿಇಓ ಕೆ.ಎಸ್. ಕಾರ್ತಿಕ್ ಉಪಸ್ಥಿತರಿದ್ದರು.