ಸೋಮವಾರಪೇಟೆ, ಜ.೨೮: ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಯುವ ಸಮಾವೇಶ ಮತ್ತು ಬೈಕ್ ಜಾಥಾ ನಡೆಯಿತು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ನೂರಾರು ಮಂದಿ ಕಾಯಕರ್ತರು ಆಗಮಿಸಿ ಬೈಕ್ ಜಾಥಾದಲ್ಲಿ ಭಾಗವಹಿಸಿದ್ದರು. ಕೇಸರಿ ಬಾವುಟಗಳೊಂದಿಗೆ ಆಂಜನೇಯ ದೇವಾಲಯದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆದು, ಬೇಳೂರು ಬಾಣೆಯಲ್ಲಿ ಸಮಾಪನಗೊಂಡಿತು.
ಯುವ ಸಮಾವೇಶದಲ್ಲಿ ಭಾಗಿಯಾಗಿದ್ದ ವಿಶ್ವ ಹಿಂದೂ ಪರಿಷತ್ನ ಪ್ರಮುಖರಾದ ಚಿ.ನಾ. ಸೋಮೇಶ್ ಅವರು, ಭಾರತದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಆದರ್ಶ, ರಾಷ್ಟçಭಕ್ತಿಯನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಭಾರತದ ಸ್ವಾತಂತ್ರö್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಸೇನೆಯನ್ನು ಕಟ್ಟಿದ ನೇತಾಜಿ ಅವರ ಕೆಚ್ಚೆದೆಯ ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ತಿಳಿಸುವ ಉದ್ದೇಶದಿಂದ ಇಂತಹ ಯುವ ಸಮಾವೇಶಗಳು ಹೆಚ್ಚು ಆಯೋಜನೆಗೊಳ್ಳಬೇಕು ಎಂದರು.
ವ್ಯಸನಮುಕ್ತ ಭಾರತ ನಿರ್ಮಾಣ, ಅನ್ಯಮತೀಯರ ಭೂ ಕಬಳಿಕೆಯ ವಿರುದ್ಧ ಜಾಗೃತಿ, ಮಹಿಳಾ ದೌರ್ಜನ್ಯಗಳ ವಿರುದ್ಧದ ಹೋರಾಟ, ಧರ್ಮ ರಕ್ಷಣೆಯೊಂದಿಗೆ ರಾಷ್ಟç ವಿರೋಧಿ ಶಕ್ತಿಗಳ ದಮನಕ್ಕಾಗಿ ಯುವ ಸಮುದಾಯ ಸದಾ ಜಾಗೃತವಿರಬೇಕು ಎಂದು ಚಿ.ನಾ ಸೋಮೇಶ್ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸಾವನ್ ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಬೋಜೇಗೌಡ, ತಾಲೂಕು ಸಂಯೋಜಕ ಎಂ.ಬಿ. ಉಮೇಶ್, ಸಹ ಸಂಯೋಜಕ ಸೂರಜ್, ಯುವ ಟೋಳಿ ಪ್ರಮುಖ್ ಸುನಿಲ್ ಮಾದಾಪುರ, ಪ್ರಾಂತ ಟೋಳಿ ಪ್ರಮುಖ್ ಸುಭಾಷ್ ತಿಮ್ಮಯ್ಯ, ಸಂಘಟನೆಯ ಪ್ರಮುಖ ರವಿ ಕುಶಾಲಪ್ಪ ಅವರುಗಳು ಉಪಸ್ಥಿತರಿದ್ದರು.