ಮಡಿಕೇರಿ, ಜ. ೨೭: ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕರಾದ ವಿಘ್ನೇಶ್ ಭಟ್ ಹಾಗೂ ಅವರ ತಾಯಿ ಗೀತಾ (೭೫) ಅವರ ಮೇಲೆ ಹಲ್ಲೆ ನಡೆದಿದ್ದು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರೂ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಚಕರ ನಿವಾಸ ಮೂರ್ನಾಡಿನಲ್ಲಿ ಇಂದು ಸಂಜೆ ಆಗಮಿಸಿದ ಈರ್ವರು ಹಲ್ಲೆ ನಡೆಸಿದ ಬಳಿಕ ಪರಾರಿಯಾಗಿದ್ದಾರೆ. ಅರ್ಚಕರ ಮೂಗಿನ ಹಾಗೂ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು, ಹಲ್ಲೆ ತಡೆಯಲು ಬಂದ ಅರ್ಚಕರ ತಾಯಿ ಗೀತಾ ಅವರನ್ನು ಹಲ್ಲೆಕೋರರು ತಳ್ಳಿದ ಕಾರಣ ಅವರಿಗೂ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಆಸ್ಪತ್ರೆಯಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಗಾಯಾಳು ವಿಘ್ನೇಶ್ ಅವರು, ಮಂಡೇಟಿರ ಅನಿಲ್ ಎಂಬವರು ಕರೆ ಮಾಡಿ ಪೂಜೆಯೊಂದಕ್ಕೆ ಅರ್ಚಕರ ಅಗತ್ಯವಿತ್ತು ಎಂಬುದಾಗಿ ಹೇಳಿ ಮನೆಯ ವಿಳಾಸವನ್ನು ಕೇಳಿ ಪಡೆದು ಇಂದು ಸಂಜೆ ೪.೪೫ಕ್ಕೆ ಮನೆಗೆ ಬಂದರು. ಅನಿಲ್ ಅವರೊಂದಿಗೆ ಇನ್ನೊಬ್ಬರು ಕೂಡ ಇದ್ದರು. ನೀವೇ ಕಟ್ಟೆಮಾಡು ದೇವಾಲಯದ ಪ್ರಧಾನ ಅರ್ಚಕರ? ಎಂಬುದಾಗಿ ಪ್ರಶ್ನಿಸಿದರು. ನಾನು ಹೌದು ಎಂದು ಉತ್ತರಿಸಿದೆ. ನಾವು ಮಾಂಸಹಾರಿ ಊಟ ಮಾಡಿದ್ದೇವೆ. ನಿಮ್ಮ ಮನೆಯೊಳಗೆ ಬರುವುದಿಲ್ಲ. ನೀವೇ ಹೊರಗೆ ಬನ್ನಿ ಎಂದರು. ಹೊರಬಂದಕ್ಷಣ ಇಬ್ಬರೂ ನನಗೆ ಏಕಾಏಕಿ ಹೊಡೆಯ ಲಾರಂಭಿಸಿದರು. ನಂತರ ಚಾಕು ವಿನಿಂದ ಇರಿಯಲೂ ಬಂದರು. ಈ ಸಂದರ್ಭ ಮನೆಯೊಳಗಿದ್ದ ನನ್ನ ತಾಯಿ ಗೀತಾ ಅವರು ತಡೆಯಲು ಬಂದಾಗ ಅವರನ್ನೂ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ತಳ್ಳಿ, ಒದ್ದು ಕೆಳಕ್ಕೆ ಹಾಕಿ ಪರಾರಿಯಾದರು ಎಂಬುದಾಗಿ ಮಾಹಿತಿ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅರ್ಚಕ ವಿಘ್ನೇಶ್ ಅವರ ಪತ್ನಿ ಸೌಮ್ಯ ಅವರು, ತಾವು ನಡೆಸುತ್ತಿರುವ ಅಂಗಡಿಗೆ ಸಂಜೆ ವೇಳೆ ಇಬ್ಬರು ಬಂದು ತಮ್ಮ ಪತಿ ವಿಘ್ನೇಶ್ ಅವರ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದಾಗಿ ಮಾಹಿತಿ ನೀಡಿದರು. ಹಲ್ಲೆ ನಡೆದ ಸಂದರ್ಭ ಪುತ್ರ ಪ್ರೀತಮ್ ಕೂಡ ಮನೆಯೊಳಗೆ ಇದ್ದುದಾಗಿ ಅವರು ಹೇಳಿದರು.

ಈ ಹಿಂದೆ ಬಂದಿದ್ದ ಧ್ವನಿ ಸಂದೇಶಗಳು

ಕಳೆದ ೧೫ ದಿವಸಗಳ ಹಿಂದೆ ತನ್ನ ಪತಿಗೆ ಹಲವಾರು ಮಂದಿ ಕಟ್ಟೆಮಾಡು ದೇವಾಲಯದಲ್ಲಿನ ವಸ್ತçಸಂಹಿತೆ ವಿಚಾರವಾಗಿ ಉಂಟಾದ ಗಲಭೆ ಸಂಬAಧ ಧ್ವನಿ ಸಂದೇಶವನ್ನು ಕಳುಹಿಸುತ್ತಿದ್ದರು. ದೆವ್ವದ ಧ್ವನಿಯಲ್ಲಿಯೂ ಸಂದೇಶ ರವಾನಿಸುತ್ತಿದ್ದರು. ಈ ಸಂದರ್ಭ ನಾವು ಇದು ಗಂಭೀರ ವಿಚಾರವಲ್ಲ ಎಂಬುದಾಗಿ ನಿರ್ಲಕ್ಷಿಸಿದೆವು. ಆದರಿದೀಗ ಹಲ್ಲೆ ನಡೆದಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ. ಏನೂ ಕೂಡ ತಪ್ಪು ಮಾಡದ ನಮಗೆ ಭದ್ರತೆಯೇ ಇಲ್ಲದಂತಾಗಿದೆ ಎಂಬುದಾಗಿ ಸೌಮ್ಯ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಖಂಡನೆ

ಘಟನೆ ನಡೆದ ಬಳಿಕ ಆಸ್ಪತ್ರೆಗೆ ಕೊಡಗು ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪದಾಧಿಕಾರಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ವಿಘ್ನೇಶ್ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದರು. ಘಟನೆಯನ್ನು ವಿದ್ಯಾಭಿವೃದ್ಧಿ ನಿಧಿ ಖಂಡಿಸುವುದಾಗಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಹೇಳಿದರು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭ ನಿಧಿಯ ಖಜಾಂಚಿ ಜಿ.ಆರ್ ರವಿಶಂಕರ್, ಕಾರ್ಯದರ್ಶಿ ಬಿ.ಕೆ ಜಗದೀಶ್ ಹಾಗೂ ಪ್ರಮುಖರಾದ ಬಿ.ಕೆ ಅರುಣ್ ಕುಮಾರ್, ವಕೀಲ ಶಶಿಕಾಂತ್ ಎಂ.ಎನ್ ಅವರುಗಳು ಹಾಜರಿದ್ದರು.

ಇಂದು ಅರ್ಚಕ ವೃಂದದ ಸಭೆ

ಘಟನೆ ಸಂಬAಧ ಪ್ರತಿಕ್ರಿಯಿಸಿದ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಠ-ಮಂದಿರ ಪ್ರಮುಖ ಹಾಗೂ ಅರ್ಚಕರಾದ ಡಾ.ಮಹಭಲೇಶ್ವರ ಭಟ್, ಇವತ್ತಿನ ಘಟನೆ ಅರ್ಚಕರ ವೃಂದಕ್ಕೆ ಭಯ ಹುಟ್ಟಿಸುವಂತದ್ದು. ಜಿಲ್ಲೆಯಲ್ಲಿನ ದೇವಾಲಯದ ಅರ್ಚಕರಿಗೆ ಸಂಭಾವನೆ ಸಾಲದೇ ಇದ್ದರೂ ವೃತ್ತಿ ಎಂಬ ವಿಚಾರಕ್ಕೆ ಸುಸೂತ್ರವಾಗಿ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಚಕ ವಿಘ್ನೇಶ್ ಭಟ್ ಅವರು ಕಟ್ಟೆಮಾಡು ವಿಚಾರ ಸಂಬAಧ ಜನಾಂಗಗಳ ನಡುವಿನ ಸಂಘರ್ಷದ ವಿಚಾರದಲ್ಲಿ ಭಾಗಿಯಾಗಿಲ್ಲ. ಆದರೆ ಅವರ ಮನೆಗೇ ಬಂದು ಹಲ್ಲೆ ಮಾಡಿರುವುದು ಖಂಡನೀಯ. ನಾಳೆ ಘಟನೆ ಸಂಬAಧ ಚರ್ಚಿಸಲು ಜಿಲ್ಲಾ ಅರ್ಚಕರ ವೃಂದವನ್ನು ಸೇರಿಸಿ ಸಭೆಯನ್ನು ಕರೆಯಲಾಗಿದೆ ಎಂದ ಅವರು, ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸುವAತಾಗಬೇಕೆAದರು.

ಕೊಡಗು ಹವ್ಯಕ ವಲಯ ಖಂಡನೆ

ಇAದು ಅರ್ಚಕರಾದ ವಿಘ್ನೇಶ್ ಭಟ್ ಅವರ ಮೇಲೆ ನಡೆದ ಹಲ್ಲೆ, ಸರ್ವಲೋಕ ಹಿತ ಬಯಸುವ ಬ್ರಾಹ್ಮಣ ಸಮಾಜಕ್ಕೆ ನೋವು ತರುವಂತದ್ದು. ಈ ವಿಚಾರದಲ್ಲಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕೊಡಗು ಹವ್ಯಕ ವಲಯದ ಅಧ್ಯಕ್ಷರಾದ ಸುಬ್ರಮಣ್ಯ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಪತಿ ಹಾಗೂ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಗೆ ಜಿಲ್ಲಾ ಹೆಚ್ಚುವರಿ ಎಸ್.ಪಿ ಸುಂದರರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಗಾಯಾಳುಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.