ಕಣಿವೆ, ಜ. ೨೭ : ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕುಗಳ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕ ಸಂಪೂರ್ಣವಾಗಿ ಕಲುಷಿತ ಪರಿಸರದಲ್ಲಿ ನಡೆಯುತ್ತಿದ್ದರೂ ಕೂಡ ಸಂಬAಧಿತ ಇಲಾಖೆಯ ಅಧಿಕಾರಿಗಳಾಗಲೀ ಸ್ಥಳೀಯ ಕೂಡುಮಂಗಳೂರು ಗ್ರಾಪಂ ಆಡಳಿತವಾಗಲೀ ಇತ್ತ ಗಮನಿಸಿಲ್ಲ.
ಅಂಗನವಾಡಿಗಳ ಎಳೆಯ ಕಂದಮ್ಮಗಳು, ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರದ ಕಿಟ್ಗಳನ್ನು ಸಿದ್ದಪಡಿಸುವ ಈ ಆಹಾರ ಉತ್ಪಾದನಾ ಘಟಕ ಕೂಡ್ಲೂರು ಕೈಗಾರಿಕಾ ಬಡಾವಣೆಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಹಳೆಯ ಗೋದಾಮು ಒಂದರಲ್ಲಿ ವಾರ್ಷಿಕ ೫ ಲಕ್ಷ ಬಾಡಿಗೆಯ ಒಪ್ಪಂದದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ನಡೆಯುತ್ತಿದೆ.
ಘಟಕದ ಬಳಿ ಸಿಮೆಂಟ್ ಧೂಳು
ಈ ಆಹಾರ ಉತ್ಪಾದನಾ ಘಟಕದ ಬಳಿ ಖಾಸಗಿ ವ್ಯಕ್ತಿಯೊಬ್ಬರ ಸಿಮೆಂಟ್ ಗೋದಾಮು ಇದ್ದು ನಿತ್ಯವೂ ಲಾರಿಗಳಿಂದ ಸಿಮೆಂಟ್ ಲೋಡ್ ಮತ್ತು ಅನ್ ಲೋಡ್ ಮಾಡುವ ಕಾರಣ ಸಿಮೆಂಟ್ ಚೀಲದ ಧೂಳು ನೇರವಾಗಿ ಈ ಘಟಕದೊಳಗೆ ಸೇರುತ್ತಿದೆ. ಹಾಗಿದ್ದರೂ ಘಟಕದ ಮಂದಿ ಧೂಳು ಅಥವಾ ಇನ್ನಿತರೇ ಕಲುಷಿತ ವಾತಾವರಣದಿಂದ ಜಾಗೃತಿ ವಹಿಸುವ ಎಚ್ಚರಿಕೆ ವಹಿಸಿಲ್ಲ. ಕೊನೆಯ ಪಕ್ಷ ಈ ಸಿಮೆಂಟ್ ಧೂಳು ತಡೆಯಲು ಕೊನೆಯ ಪಕ್ಷ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಅನ್ನಾದರೂ ಅಳವಡಿಸಿ ಕೊಳ್ಳಬಹುದಿತ್ತು. ಆದರೆ ಯಾವ ಮುಂಜಾಗ್ರತಾ ಕ್ರಮಗಳು ಇಲ್ಲಿ ಇಲ್ಲ. ೩ಆರನೇ ಪುಟಕ್ಕೆ
(ಮೊದಲ ಪುಟದಿಂದ)
ಘಟಕದ ಪರಿಸರವೂ ಕಲುಷಿತ
ಈ ಆಹಾರ ಉತ್ಪಾದನಾ ಘಟಕದ ಆಸು ಪಾಸು ಕಲುಷಿತ ವಾತಾವರಣದೊಳಗೆ ಮುಳುಗಿದೆ. ಕಾಡು ಗಿಡ ಸಸ್ಯಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ಇನ್ನಿತರೇ ತ್ಯಾಜ್ಯಗಳ ರಾಶಿ ಇಲ್ಲಿ ಕಂಡು ಬರುತ್ತಿದ್ದರೂ ಕೂಡ ಸಂಬAಧಿಸಿದವರು ಯಾವುದೇ ಎಚ್ಚರಿಕೆ ವಹಿಸಿಲ್ಲ.
ಮಹಿಳೆಯರಿಂದ ನಿರ್ವಹಣೆ
ಈ ಆಹಾರ ಉತ್ಪಾದನಾ ಘಟಕ ಮಹಿಳಾ ಗುಂಪು ಒಂದರಿAದ ಕಳೆದ ೨೦ ವರ್ಷಗಳಿಂದಲೂ ನಡೆಯುತ್ತಿದೆ. ಈ ಮಹಿಳಾ ಮಣಿಗಳೇ ವಾರ್ಷಿಕವಾಗಿ ಟೆಂಡರು ಮಾದರಿಯಲ್ಲಿ ಈ ಘಟಕವನ್ನು ನಿರ್ವಹಿಸುತ್ತಿದ್ದಾರೆ.
ಆಹಾರದ ಸುರಕ್ಷತೆ ಪಾಲನೆಯಿಲ್ಲ
ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಡಿಯಲ್ಲಿ ಪೂರೈಕೆಯಾಗುತ್ತಿರುವ ಪೌಷ್ಠಿಕ ಆಹಾರದ ಕಿಟ್ ಗಳು ಇರುವ ಚೀಲಗಳನ್ನು ಆಹಾರ ಗುಣಮಟ್ಟ ಪ್ರಾಧಿಕಾರದ ನಿಯಮಾವಳಿಗಳ ಪ್ರಕಾರ ನಿರ್ವಹಣೆಯಾಗುತ್ತಿಲ್ಲ.
ಅಂದರೆ ಆಹಾರದ ಪೊಟ್ಟಣಗಳ ಚೀಲಗಳನ್ನು ನೆಲದಲ್ಲಿ ಇಡುವಂತಿಲ್ಲ. ಮರ ಅಥವಾ ಕಬ್ಬಿಣದ ಸ್ಟ್ಯಾಂಡ್ ನಿರ್ಮಿಸಿ ಅದರ ಮೇಲೆ ದಾಸ್ತಾನಿಡಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಯಾವ ನಿಯಮಗಳೂ ಕೂಡ ಪಾಲನೆಯಾಗುತ್ತಿಲ್ಲ. ಆಹಾರದ ಸಾಮಗ್ರಿಗಳ ಚೀಲಗಳನ್ನು ಮನಬಂದAತೆ ಘಟಕದೊಳಗೆ ಎಲ್ಲೆಡೆ ಬಿಸಾಕಿರುವುದು ಕಂಡುಬರುತ್ತಿದೆ.
ಸ್ವಚ್ಚತೆ ಮೊದಲೇ ಇಲ್ಲ
೬ ತಿಂಗಳಿAದ ೩ ವರ್ಷದವರೆಗಿನ ಪುಟ್ಟ ಮಕ್ಕಳಿಗೆ ನೀಡುತ್ತಿರುವ ಪೌಷ್ಠಿಕ ಆಹಾರದ ಸಾಮಗ್ರಿಗಳ ತಯಾರಿಕಾ ಘಟಕದ ಹೊರ ಮತ್ತು ಒಳ ಆವರಣ ಸ್ವಚ್ಛವಾಗಿಲ್ಲ. ಘಟಕದ ಹೊರಗೆ ಕಲುಷಿತ ವಾತಾವರಣ ಕಂಡು ಬಂದರೆ ಘಟಕದ ಒಳಗೆ ಹೊರಗಿಂದ ಗಾಳಿಯಲ್ಲಿ ತೂರಿ ಬರುವ ಸಿಮೆಂಟ್ ಹಾಗೂ ಮಣ್ಣಿನ ಧೂಳಿನ ದರ್ಶನವಾಗುತ್ತಿದೆ.
ಗರ್ಭಿಣಿಯರು, ಬಾಣಂತಿಯರು ಹಾಗೂ ಎಳೆಯ ಕಂದಮ್ಮಗಳಿಗೆAದೇ ಸಿದ್ಧಪಡಿಸುವ ಆಹಾರದ ಗೋದಾಮಿನೊಳಗೆ ದೇವರ ಮನೆ ಅಥವಾ ಅಡುಗೆ ಮನೆಯಲ್ಲಿ ಇರಬೇಕಾದಂತಹ ಶುಚಿತ್ವದ ವಾತಾವರಣ ಕಂಡುಬರಬೇಕು. ಆದರೆ ಈ ಘಟಕದೊಳಗೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ.
ಈ ಬಗ್ಗೆ ಇಲ್ಲಿನ ಮಹಿಳಾ ಮಣಿಗಳನ್ನು ಪ್ರಶ್ನಿಸಿದಾಗ ಕೈಗಾರಿಕಾ ಬಡಾವಣೆಯ ಬೇರೊಂದು ಜಾಗದಲ್ಲಿ ಗೋದಾಮು ನೋಡಿದ್ದೇವೆ. ಅಲ್ಲಿ ಬಾಡಿಗೆ ಜಾಸ್ತಿ ಕೇಳುತ್ತಿದ್ದಾರೆ. ಹಾಗಾಗಿ ಹೋಗಿ ಬರಲು ರಸ್ತೆಯ ಬದಿಯಲ್ಲೇ ಇರುವ ಈಗಿನ ಗೋದಾಮು ವಾಸಿ ಅಂತಾ ಇಲ್ಲೇ ಕಾಲ ಕಳೆಯುತ್ತಿರುವುದಾಗಿ ಹೇಳುತ್ತಾರೆ. ಆದರೆ ಮಕ್ಕಳು ಹಾಗೂ ಬಡ ಮಹಿಳೆಯರ ಆರೋಗ್ಯದ ಹಿತಾಸಕ್ತಿಯನ್ನು ಈ ಮಹಿಳಾ ಮಣಿಗಳಾಗಲೀ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಾಗಲೀ ಯೋಚಿಸದೇ ಬೇರಾವುದೇ ಯೋಜನೆಯನ್ನೂ ರೂಪಿಸದೇ ಇರುವುದು ಮಾತ್ರ ಜವಬ್ದಾರಿಯುತ ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಇತ್ತ ತಾಲೂಕು ಅಥವಾ ಜಿಲ್ಲಾಡಳಿತ ಮಂದಿ ಒಮ್ಮೆ ತಮ್ಮ ಚಿತ್ತ ಹರಿಸುವರೇ ಕಾದು ನೋಡಬೇಕಿದೆ.
-ವಿಶೇಷ ವರದಿ : ಕೆ.ಎಸ್.ಮೂರ್ತಿ