ಸುಂಟಿಕೊಪ್ಪ, ಜ.೨೭: ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಖಾಸಗಿ ತೋಟ ವೊಂದರ ಬಾರೀ ಗಾತ್ರದ ಮರ ಒಣಗಿನಿಂತಿದ್ದು, ಅಪಾಯದ ಅಂಚಿ ನಲ್ಲಿದೆ. ಸಂಬAಧಿಸಿದ ಇಲಾಖೆಯ ವರು ಮರ ತೆರವು ಗೊಳಿಸಬೇಕಿದೆ.
ಕೊಡಗರಹಳ್ಳಿ ಕಂಬಿಬಾಣೆ ಸಂಪರ್ಕ ರಸ್ತೆಯ ಖಾಸಗಿ ಶಾಲೆ, ಸರಕಾರಿ ಪ್ರಾಥಮಿಕ ಹಾಗೂ ಅನುದಾನಿತ ಪ್ರೌಢಶಾಲೆಯು ಕಾರ್ಯಾಚರಿಸುತ್ತಿದೆ. ಈ ಶಾಲೆ ಗಳಿಗೆ ವ್ಯಾಸಂಗಕ್ಕೆ ತೆರಳುವ ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದುಕೊಂಡೇ ತೆರಳು ತ್ತಾರೆ. ಅಲ್ಲದೆ ಚಿಕ್ಲಿಹೊಳೆ ಸಂಪರ್ಕ ರಸ್ತೆಯು ಇದಾಗಿದ್ದು ಈ ಭಾಗದ ನಿವಾಸಿಗಳು ವಾಹನಗಳಲ್ಲಿ ಸಂಚರಿಸುವ ಸಂದರ್ಭ ಒಣಗಿನಿಂತಿ ರುವ ಮರ ಮಕ್ಕಳ ಮತ್ತು ವಾಹನ ಸವಾರರ ಮೇಲೆ ಉರುಳಿ ಬೀಳುವ ಸಾಧ್ಯತೆ ಅಧಿಕವಾಗಿದೆ.
ಅನಾಹುತ ಸಂಭವಿಸುವ ಮುನ್ನ ಸಂಬAಧಿಸಿದ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯವರು ಇತ್ತಕಡೆ ಗಮನಹರಿಸಿ ಮರ ತೆರವಿಗೆ ಕ್ರಮ ಕೈಗೊಳ್ಳುವಂತಾಗಲಿಎAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.