ಮಡಿಕೇರಿ, ಜ. ೨೭: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಕೊಂಡಾಡಿದರೂ ಕಾಂಗ್ರೆಸ್ ಮಾತ್ರ ಅವರನ್ನು ನಿರಂತರವಾಗಿ ಅವಮಾನಿಸಿ ಸಿಗಬೇಕಾದ ಗೌರವವನ್ನು ನೀಡದೆ, ಇದೀಗ ಅವರ ಹೆಸರನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಸಂಘಟನೆ ವತಿಯಿಂದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಿಸಿದ್ದು ಯಾರು? ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರಿಗೆ ಅವಮಾನ ಹಾಗೂ ಸನ್ಮಾನ ಮಾಡಿದವರು ಯಾರು?. ಸಂವಿಧಾನವನ್ನು ದುರ್ಬಲ ಹಾಗೂ ಸಬಲ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಈ ಅಭಿಯಾನ ಕೈಗೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್ ಹೆಸರು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಚುನಾವಣಾ ಪ್ರಚಾರದ ಸರಕಾಗಿ ಮಾರ್ಪಟ್ಟಿದೆ. ಜೈಭೀಮ್ ಘೋಷಣೆ ಕೂಗುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ಅಂಬೇಡ್ಕರ್ ಅವರ ಜೀವನದ ಅಂತ್ಯದ ತನಕವೂ ಕಾಂಗ್ರೆಸ್ ನಾಯಕರು ನೋವನ್ನು ಮಾತ್ರ ನೀಡಿದ್ದಾರೆ. ಪ್ರಪಂಚಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ನೋವುಂಡರು ದೇಶದ ಉನ್ನತಿ ಹಾಗೂ ಅಭ್ಯುಧಯಕ್ಕಾಗಿ ಅದನ್ನು ಸಹಿಸಿಕೊಂಡು ಕೆಲಸ ಮುಂದುವರೆಸಿದ್ದರು ಎಂದರು. ಸಂವಿಧಾನ ರಚನಾ ಸಭೆಗೆ ಪ್ರತಿನಿಧಿಯಾಗಬೇಕೆಂಬ ಚುನಾವಣೆಯಲ್ಲಿ ವ್ಯವಸ್ಥಿತವಾಗಿಅಂಬೇಡ್ಕರ್ ಅವರನ್ನು ಸೋಲಿಸಿದವರು ಕಾಂಗ್ರೆಸ್ ನಾಯಕರು. ೩ಆರನೇ ಪುಟಕ್ಕೆ

(ಮೊದಲ ಪುಟದಿಂದ)ಅನAತರ ಜೋಗೆಂದ್ರನಾಥ್ ಮಂಡಲ ಅವರ ಬೆಂಬಲದಿAದ ಸ್ಪರ್ಧಿಸಿ ಗೆಲುವು ಪಡೆದು ಪ್ರತಿನಿಧಿಯಾಗುತ್ತಾರೆ. ದೇಶ ವಿಭಜನೆ ಸಂದರ್ಭ ಅಂಬೇಡ್ಕರ್ ಗೆದ್ದಿದ್ದ, ಪರಿಶಿಷ್ಟ ಜನಾಂಗದವರು ಹೆಚ್ಚಿರುವ ಪಶ್ಚಿಮ ಬಂಗಾಳದ ಕ್ಷೇತ್ರವೊಂದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು. ಇವೆಲ್ಲ ಅಂಬೇಡ್ಕರ್ ಅವರನ್ನು ಕಡೆಗಣಿಸಿ ಮೌನವಾಗಿಸುವ ಪ್ರಯತ್ನವಾಗಿತ್ತು. ಇದಕ್ಕೆಲ್ಲ ಕುಂದದ ಅಂಬೇಡ್ಕರ್ ನಂತರದ ದಿನಗಳಲ್ಲಿ ತಮ್ಮ ಪ್ರಭಾವದಿಂದ ಅವಿರೋಧವಾಗಿ ಆಯ್ಕೆಗೊಂಡು ತಮ್ಮ ಸಾಮರ್ಥ್ಯ ತೋರಿ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಬಳಿಕ ಕಾನೂನು ಸಚಿವರಾಗುತ್ತಾರೆ. ತಮ್ಮ ಸ್ಥಾನಕ್ಕೆ ಅಂಬೇಡ್ಕರ್ ರಾಜೀನಾಮೆಗೆ ನೀಡಿದ ಕಾರಣ ಅರ್ಥೈಸಿಕೊಂಡರೆ ಅವರ ಮಹತ್ವಾಕಾಂಕ್ಷೆ ತಿಳಿಯುತ್ತದೆ. ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ನೀಡುವುದು ಅವರ ಒತ್ತಾಸೆಯಾಗಿತ್ತು. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಉದ್ದೇಶದಿಂದ ಆಯೋಗ ರಚನೆಗೆ ವಿಧಿ ರಚಿಸಿದ್ದರು. ಬಹುಜನರಿಗೆ ನ್ಯಾಯ ಕೊಡಲಾಗದಿದ್ದರೆ ಈ ಹುದ್ದೆಯಲ್ಲಿದ್ದು, ಪ್ರಯೋಜನವಿಲ್ಲ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಯೋಜನೆ ಹಾಗೂ ಹಣಕಾಸು ಸಚಿವ ಸ್ಥಾನ ನೀಡುವಂತೆ ಕೋರಿದ್ದರು. ಅವರು ಈ ಸಚಿವ ಸ್ಥಾನ ದೊರೆತ್ತಿದ್ದರೆ ಇಂದು ಭಾರತ ಮತ್ತಷ್ಟು ವ್ಯವಸ್ಥಿತ ಹಾಗೂ ಆರ್ಥಿಕವಾಗಿ ಸುಭದ್ರವಾಗಿರುತ್ತಿತ್ತು. ಜಮ್ಮು-ಕಾಶ್ಮೀರ ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸಬೇಕು ಇಲ್ಲದಿದ್ದಲ್ಲಿ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಮುನ್ಸೂಚನೆ ನೀಡಿದ್ದರೂ ಕಾಂಗ್ರೆಸ್ ಸರಕಾರ ಒಪ್ಪಿಗೆ ನೀಡದೆ ಸಾರಸಗಟಾಗಿ ತಳ್ಳಿಹಾಕಿದ ಪರಿಣಾಮ ಅಷ್ಟು ವರ್ಷಗಳ ಸಮಸ್ಯೆ ಜೀವಂತವಾಗಿತ್ತು ಇವೆಲ್ಲವೂ ಅವರ ರಾಜೀನಾಮೆಗೆ ಕಾರಣಗಳು ಎಂದು ಮಹೇಶ್ ಹೇಳಿದರು.

ಅಂಬೇಡ್ಕರ್ ಕನಸುಗಳನ್ನು ನುಚ್ಚುನೂರು ಮಾಡಿದ ಕಾಂಗ್ರೆಸ್‌ಗೆ ಜೈಭೀಮ್ ಎನ್ನುವ ಅಧಿಕಾರವಿಲ್ಲ. ಸಂವಿಧಾನ ರಚನೆ ಬಳಿಕ ಅಂಬೇಡ್ಕರ್ ಅವರು ಸದನ ಪ್ರವೇಶಿಸಬೇಕಿತ್ತು. ೫೨ರ ಚುನಾವಣೆಯಲ್ಲಿ ಜವಹಾರ್‌ಲಾಲ್ ನೆಹರು ಅಂಬೇಡ್ಕರ್ ಅವರ ಆಪ್ತಕಾರ್ಯದರ್ಶಿಯನ್ನು ನಿಲ್ಲಿಸಿ ಅಂಬೇಡ್ಕರ್ ಸೋಲಿಸಿದ್ದರು. ಇದರಲ್ಲಿ ೭೪ ಸಾವಿರ ಅಸಿಂಧು ಮತಗಳಾಗಿದ್ದವು. ಇದನ್ನು ಗಮನಿಸಿದಾಗ ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಸೋಲಿಸಿ ಅದನ್ನು ಸಂಭ್ರಮಿಸಿದ್ದರು. ಅನಂತರದ ೫೪ರ ಉಪಚುನಾವಣೆಯಲ್ಲಿಯೂ ಸೋಲಿಸುತ್ತಾರೆ. ಇಷ್ಟೆಲ್ಲ ಅವಮಾನ ನೀಡಿದ ಕಾಂಗ್ರೆಸ್ ಇಂದು ಅಂಬೇಡ್ಕರ್ ಅವರನ್ನು ಮತಕ್ಕಾಗಿ ಸ್ಮರಿಸಿಕೊಳ್ಳುತ್ತಿರುವುದು ವಿಪರ್ಯಾಸ. ನಿರಂತರ ಸೋಲಿನಿಂದ ಜರ್ಝರಿತರಾಗಿ ನಿಧನರಾಗುತ್ತಾರೆ. ಅನಂತರವೂ ಸಿಗಬೇಕಾದ ಗೌರವ ಜವಹಾರ್ ಲಾಲ್ ನೆಹರು ನೀಡಿಲ್ಲ. ಪಾರ್ಥಿವ ಶರೀರ ತರಲು ೫ ಸಾವಿರ ಹಣವಿಲ್ಲದೆ ಸಾಲ ಮಾಡಿ ತರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅವರ ಅಂತ್ಯಸAಸ್ಕಾರಕ್ಕೆ ಸೂಕ್ತ ಜಾಗ ಒದಗಿಸಲಿಲ್ಲ. ಸಮುದ್ರ ದಡದಲ್ಲಿ ಅಂತ್ಯಸAಸ್ಕಾರ ಮಾಡಲಾಯಿತು. ನಿಧನ ನಂತರ ೧೯೬೦ರಲ್ಲಿ ಅಂಬೇಡ್ಕರ್ ವಿರುದ್ಧ ಗೆದ್ದ ವ್ಯಕ್ತಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗುತ್ತದೆ. ಅದೇ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ಸೇತರ ಸರಕಾರ ೩ ದಶಕಗಳ ನಂತರ ಭಾರತ ರತ್ನ ನೀಡುತ್ತದೆ. ಅಂಬೇಡ್ಕರ್ ನಿಧನರಾದ ಜಾಗದಲ್ಲಿ ಸ್ಮಾರಕ ಮಾಡಬೇಕೆಂದು ಉದ್ದೇಶಿಸಿದವರು ಅಟಲ್ ಬಿಹಾರಿ ವಾಜಪೇಯಿ, ಅವರು ಸೋತ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈ ಯೋಜನೆ ಕಡತ ಕಾಂಗ್ರೆಸ್ ಕಣ್ಣಿಗೆ ಬಿದ್ದಿರಲಿಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ಯಶಸ್ವಿಯಾದರು. ಅವರ ಜನ್ಮಸ್ಥಳ, ಲಂಡನ್‌ನಲ್ಲಿ ಓದುತ್ತಿದ್ದ ಮನೆ, ದೀಕ್ಷಾ ಭೂಮಿ, ಚೈತ್ಯಭೂಮಿಯನ್ನು ಬಿಜೆಪಿ ಸರಕಾರ ಅಭಿವೃದ್ಧಿಪಡಿಸಿದೆ. ಸಮಾನತೆಯ ಪ್ರತಿಮೆ ನಿರ್ಮಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಂವಿಧಾನ ಬದಲಾವಣೆಯನ್ನು ಯಾರು ಒಪ್ಪುವುದಿಲ್ಲ. ಈ ರೀತಿ ಚರ್ಚೆ ಬಿಜೆಪಿಗೆ ಹಿನ್ನಡೆಯಾಗಿದೆ. ಇದು ಕಾಂಗ್ರೆಸ್‌ನಿAದ ಕುತಂತ್ರ ಎಂದು ಟೀಕಿಸಿದ ಅವರು, ಜನಪ್ರತಿನಿಧಿಗಳಾಗಲು ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ಅವರು ಪ್ರಪಂಚದ ಅಗ್ರಗಣ್ಯ ನಾಯಕ ಎಂದು ಬಣ್ಣಿಸಿದರು.

ನಿರಂತರ ಅಧ್ಯಯನ ಮೂಲಕ ಸಂವಿಧಾನ ರಚಿಸಿ ದೇಶಕ್ಕೆ ನೀಡಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಬದಲಿಸಿದ್ದು ಯಾರು? ಪುಸ್ತಕ ಲೇಖಕ ವಿಕಾಸ್ ಪುತ್ತೂರು ಮಾತನಾಡಿ, ಭಾರತದ ಸಂವಿಧಾನ ಪ್ರಪಂಚದ ಅಗ್ರಗಣ್ಯ ಸ್ಥಾನದಲ್ಲಿದೆ. ಇದಕ್ಕಾಗಿ ಹಲವು ವರ್ಷಗಳ ಶ್ರಮವಿದೆ. ಸಂವಿಧಾನವನ್ನು ಕಾಂಗ್ರೆಸ್ ಸರಕಾರ ೭೫ ಬಾರಿ ಬದಲಾವಣೆ ಮಾಡಿದೆ. ೧೯೭೬ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಕೂಡ ಸಂವಿಧಾನ ಬದಲಾವಣೆ ಮಾಡಿದ್ದಾರೆ. ಸಂವಿಧಾನ ಬದಲಿಸುವುದು ಸದನದ ಕರ್ತವ್ಯ, ನ್ಯಾಯಾಲಯದಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅನಂತಕುಮಾರ್ ಹೆಗ್ಗಡೆ ಮಾತನ್ನು ವಿರೋಧಿಸುವವರು ಇಂದಿರಾ ಗಾಂದಿ ಮಾತನ್ನು ಏಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಮೈಸೂರು ಸಾಮಾಜಿಕ ನ್ಯಾಯ ವೇದಿಕೆ ಕಾರ್ಯದರ್ಶಿ ಎಂ.ಎಸ್.ಪರಮಾನAದ ಮಾತನಾಡಿ, ಅಪಪ್ರಚಾರ ಹಾಗೂ ಆಮಿಷ ಮೂಲಕ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ನೈಜ ಪ್ರಜಾಪ್ರಭುತ್ವದ ಗೆಲುವು ಕಾಂಗ್ರೆಸ್‌ನಿAದ ಸಾಧ್ಯವಾಗಿಲ್ಲ. ಸಾಮಾನ್ಯರು ದೇಶದ ಅತ್ಯುನ್ನತ ಹುದ್ದೆಗೆ ಹೋಗಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು ಹೊರತು ಕುಟುಂಬ ರಾಜಕಾರಣವಲ್ಲ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಅರ್ಥಹೀನವಾಗಿತ್ತು. ಸಂವಿಧಾನ ತಿದ್ದುಪಡಿ ಮಾಡುವ ಪರಿಚ್ಛೇದವನ್ನೇ ಇಂದಿರಾ ಗಾಂಧಿ ಬದಲಾವಣೆ ಮಾಡಿದ್ದರು. ನರೇಂದ್ರ ಮೋದಿ ಅವರು ಸಂವಿಧಾನವನ್ನು ಧರ್ಮಗಂಥ್ರ ಎಂದು ಘೋಷಿಸಿದ್ದಾರೆ ಎಂದರು.

ಶ್ರೀ ಮದೆಮಹದೇಶ್ವರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ರವಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ. ಚಂದ್ರು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಅಪ್ರು ರವೀಂದ್ರ, ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಸಂಚಾಲಕ ವಿ.ಕೆ. ಲೋಕೇಶ್ ಹಾಜರಿದ್ದರು.