ವೀರಾಜಪೇಟೆ, ಜ. ೧೦: ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯಲ್ಲಿ ಕೊಡವ ಕೂಟಾಳಿಯಡ ಕೂಟದ ಸಂಘಟನೆಯಿAದ ಕೊಡವ ಆಟ್ ಪಾಟ್ ಪಡಿಪು ಶಿಬಿರದ ಸಮಾರೋಪ ಸಮಾರಂಭವು ಕೂಟದ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೂಟ್ಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮಲ್ಲಂಗಡ ನಿರನ್ ಉತ್ತಪ್ಪ ಮಾತನಾಡಿ, ಕೊಡವ ಕೂಟಾಳಿಯಡ ಕೂಟ ಸಂಘಟನೆಯು ಸುಮಾರು ಐದು ವರ್ಷಗಳಿಂದ ಕೊಡವಾಮೆಯನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮ ಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಕಳೆದ ವರ್ಷ ಇದೇ ಸಂಘಟನೆಯು ನಮ್ಮ ಶಾಲೆಯ ಮಕ್ಕಳಿಗೆ ಕೊಡವ ಪದ್ದತಿಯಲ್ಲಿ ಸಮ್ಮಂಧ ಅಡಕುವ ಶಿಬಿರವನ್ನು ನಡೆಸಿ ಮಕ್ಕಳಿಗೆ ತರಬೇತಿ ನೀಡಿ ಯಶಸ್ವಿ ಯಾಗಿದ್ದಾರೆ. ಇವರ ತರಬೇತಿಯಲ್ಲಿ ಪಳಗಿದ ಮಕ್ಕಳು ಮದುವೆ ಸಮಾರಂಭ ದಲ್ಲಿ ಭಾಗಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವರ್ಷದಲ್ಲಿ ಇದೇ ಸಂಘಟನೆಯವರು ನಡೆಸಿದ ಆಟ್ ಪಾಟ್ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಕೋಲಾಟ್, ಬೊಳಕಾಟನ್ನು ಕಲಿತು ಮಂದ್, ಕೊಡವ ಸಮಾಜಗಳಲ್ಲಿ ಪ್ರದರ್ಶನ ನೀಡಿ ಮೊದಲ ಬಹುಮಾನವನ್ನು ಪಡೆಯುವುದರ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಿಬಿರದ ತರಬೇತು ದಾರರಾದ ಕೂಟದ ಗೌರವಾಧ್ಯಕ್ಷ ಚಂಗುಲAಡ ಸೂರಜ್ ಮಾತನಾಡಿ ಕಲಿಯುವ ಮಕ್ಕಳಲ್ಲಿ ಶಿಸ್ತು ಮುಖ್ಯ. ಕಲಿತಿರುವ ವಿದ್ಯೆಯನ್ನು ಅರ್ಧಕ್ಕೆ ಬಿಡದಂತೆ ಮುಂದುವರೆಸಿಕೊAಡು ಹೋಗುವುದು ನಿಮಗಳ ಕರ್ತವ್ಯ. ಆಗ ಮಾತ್ರ ನಮ್ಮ ಕಲಿಸುವಿಕೆಗೆ ಸಾರ್ಥಕತೆಯು ದೊರಕುವುದು ಎಂದು ಮಕ್ಕಳಿಗೆ ತಿಳಿಸಿದರು. ಈ ಸಂದರ್ಭ ಶಿಬಿರಾರ್ಥಿಗಳು ಕೋಲಾಟ್, ಬೊಳಕಾಟಿನ ಪ್ರದರ್ಶನ ನಡೆಸಿದರು. ಸಂಘಟನೆಯ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ಮಾತನಾಡಿ ಕೊಡವರ ಉಡುಗೆ ತೊಡುಗೆ ಅವರ ಹಕ್ಕು. ಸಭಾ ಸಮಾರಂಭಗಳಿಗಾಗಲಿ, ಮಂದ್ ಮಾನಿಗಾಗಲಿ ಹೋಗುವಾಗ ಮೂಲ ಉಡುಪನ್ನು ಧರಿಸಿ ಹೋಗುವುದು ಉತ್ತಮ. ಹಾಗೆ ಮಾಡುವುದರ ಮೂಲಕ ನಮ್ಮ ಆಚಾರ ವಿಚಾರ ಪದ್ದತಿ ಸಂಸ್ಕöÈತಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಲು ಸಾಧ್ಯವಾಗುತ್ತದೆ ಎಂದರು. ಆಟ್ ಪಾಟ್ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಮಾನ್ಯತೆ ಪತ್ರಗಳನ್ನು ನೀಡಲಾಯಿತು. ಸಂಘಟನೆಯ ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಪ್ರಾರ್ಥಿಸಿ, ವಂದಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ರೂಟ್ಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಚಂಗಡ ಕೋಕಿಲಾ ಬಿದ್ದಪ್ಪ ಹಾಗೂ ತರಬೇತುದಾರ ಚಂಗುಲAಡ ಮಧು ಉಪಸ್ಥಿತರಿದ್ದರು. ಕಾರ್ಯðಕ್ರಮದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್, ಉಪಾಧ್ಯಕ್ಷ ಬೊಜ್ಜಂಗಡ ಚಂಗಪ್ಪ, ಖಜಾಂಚಿ ಬೊಜ್ಜಂಗಡ ಭವ್ಯ ದೇವಯ್ಯ, ನಿರ್ದೇಶಕರಾದ ಕಾಳಮಂಡ ರಾಬಿನ್ ಅಚ್ಚಮ್ಮ, ನೂರೆರ ಸರಿತಾ ಉತ್ತಯ್ಯ ಕೊಟ್ಟಂಗಡ ಕವಿತಾ ವಾಸುದೇವ್, ಮಾಚಿಮಾಡ ಡಿಂಪಲ್, ಸದಸ್ಯರಾದ ಅಜ್ಜಮಾಡ ಸಾವಿತ್ರಿ, ಇಟ್ಟಿರ ಭವ್ಯ ಈಶ್ವರ್ ಹಾಗೂ ರೂಟ್ಸ್ ವಿದ್ಯಾ ಸಂಸ್ಥೆಯ ಶಿಕ್ಷಕರಾದ ದೇಯಂಡ ರೂಪಿತ ದಿನೇಶ್, ಮನ್ನೆರ ಮಿಥುನ ಪ್ರಮೋದ್, ಅಜ್ಜಮಾಡ ಚರಿತ ಬಿಪಿನ್ ಪಾಲ್ಗೊಂಡಿದ್ದರು. ಬೊಳಕಾಟ್‌ನಲ್ಲಿ ದೇಯಂಡ ಮುತ್ತಣ್ಣ, ಬೊಟ್ಟಂಗಡ ದೇವಯ್ಯ, ಮಾಯಣಮಾಡ ಮೋಹಿತ್, ಚೊಟ್ಟೆಯಂಡಮಾಡ ರಿತಿನ್, ತಡಿಯಂಗಡ ತಿಮ್ಮಯ್ಯ, ಮಾಣಿರ ಚಿಂತನ್, ಚೊಟ್ಟೆಯಂಡಮಾಡ ಲಿಯೋನ್, ಕಾಯಪಂಡ ಜನನ್, ಮಾಣಿರ ಪೊನ್ನಣ್ಣ, ಪೆಮ್ಮಂಡ ಚಮನ್, ದೇಕಮಾಡ ಮನಿಷ್, ಕಟ್ಟೆರ ನಾಣಯ್ಯ್ಯ, ನೂರೆರ ನಾಚಪ್ಪ, ಬಾದುಮಂಡ ಮೊಣ್ಣಪ್ಪ, ಕುಪುö್ಪಡಿರ ವರ್ಣಿತ್, ಕೋಲಾಟ್‌ನಲ್ಲಿ ದೇಯಂಡ ಮುತ್ತಣ್ಣ, ಕಟ್ಟೆರ ನಾಣಯ್ಯ, ದೇಕಮಾಡ ಮನಿಷ್,