ವೀರಾಜಪೇಟೆ, ಜ. ೯: ಕ್ಷÄಲ್ಲಕ ಕಾರಣಕ್ಕೆÀ ಕುಡಿದ ಅಮಲಿನಲ್ಲಿದ್ದ ಬಾವ ಬಾಮೈದುನರ ನಡುವೆ ಕಲಹ ಏರ್ಪಟ್ಟು ಕೊಲೆಯಲ್ಲಿ ಅಂತ್ಯ ಕಂಡ ಘಟನೆ ವೀರಾಜಪೇಟೆ ಕೆದಮುಳ್ಳೂರು ತೋರ ಗ್ರಾಮದಲ್ಲಿ ನಡೆದಿದೆ.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ (ತೋಮರ) ಗ್ರಾಮದ ಅಚ್ಚಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ಮಣಿ ಅವರ ಪುತ್ರ ಮಂಜು (ಕರಿಯಾ-೨೫) ಬಾವನಿಂದ ಹತ್ಯೆಯಾದ ವ್ಯಕ್ತಿ. ಮೃತನ ತಂಗಿ ಕಾವ್ಯ, ಪತಿ ಚಂದನ್ ಅಲಿಯಾಸ್ ಅಭಿ (೨೪) ಕೊಲೆಗೈದ ವ್ಯಕ್ತಿ.

ಘಟನೆಯ ವಿವರ

ಹತ್ಯೆಗೀಡಾಗಿರುವ ಮಂಜು, ತಂಗಿ ಕಾವ್ಯ, ತಂಗಿಯ ಪತಿ ಅಭಿ ಮತ್ತು ಮೃತನ ತಂದೆ ಮಣಿ ಇವರುಗಳು ತೋಮರ (ತೋರ) ಗ್ರಾಮದ ಅಚ್ಚಯ್ಯ ಎಂಬುವವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದರು. ತಾ.೭ರಂದು ತೋಟದ ಕಾರ್ಮಿಕರಿಗೆ ಮುಂಗಡ ಹಣ ನೀಡಲಾಗಿತ್ತು. ಅಂದು ಸಂಜೆ ಮಂಜು ಮತ್ತು ಅಭಿ ಮದ್ಯ ಸೇವನೆ ಮಾಡಿದ್ದಾರೆ. ತೋಟದ ಮಾಲೀಕರು ರಾತ್ರಿ ಕಾಫಿ ಕಣದಲ್ಲಿ ಕಾವಲು ಕಾಯುವಂತೆ ತಿಳಿಸಿದ್ದರು ಎನ್ನಲಾಗಿದೆ. ಲೈನ್ ಮನೆಯಿಂದ ಅನತಿ ದೂರದಲ್ಲಿ ಕಾಫಿಯ ಕಣವಿದೆ. ರಾತ್ರಿಯಾಗುತ್ತಲೇ ಕಾಫಿ ಕಣದಲ್ಲಿ ಕೋಳಿ ಕಾಲು ಸುಡಲು ಈರ್ವರು ಯೋಜನೆ ಹಾಕಿಕೊಂಡಿದ್ದಾರೆ. ಯೋಜನೆಯಂತೆ ಅಭಿ ಮಂಜುಗೆ ‘ನೀನು ಕೋಳಿ ಕಾಲು ಸುಡು; ನಾನು ಮನೆಯಿಂದ ಊಟ ತರುತ್ತೇನೆ’ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದಾನೆ. ನಂತರದಲ್ಲಿ ಮನೆಯಿಂದ ಹಿಂದಿರುಗಿದ ಅಭಿ ಸ್ಥಳಕ್ಕೆ ಆಗಮಿಸಿ ನೋಡಿದಾಗ ಕೋಳಿ ಕಾಲು ಸುಡದೆ ಕುಳಿತಿದ್ದ ಮೃತ ಮಂಜುವನ್ನು ಕಂಡು ಕೋಪಗೊಂಡು ನಾನು ಹೇಳಿದ ಕೆಲಸ ಮಾಡಲಿಲ್ವಾ ಎಂದು ಜಗಳಕ್ಕೆ ಮುಂದಾಗಿದ್ದಾನೆ. ಈರ್ವರ ಮಧ್ಯೆ ಕಲಹವು ತಾರಕಕ್ಕೇರಿದೆ. ತನ್ನ ಬಳಿಯಿದ್ದ ಕತ್ತಿಯಿಂದ ಅಭಿ ಮಂಜುವಿನ ತಲೆ ಭಾಗÀಕ್ಕೆ ಪ್ರಹಾರ ಮಾಡಿದ್ದಾನೆ. ಬಳಿಕ ಕತ್ತಿಯಿಂದ ಕುತ್ತಿಗೆ ಕುಯ್ದಿದ್ದಾನೆ, ಪರಿಣಾಮ ರಕ್ತಸ್ರಾವವಾಗಿ ಮಂಜು ಸ್ಳಳದಲ್ಲೇ ಮೃತಪಟ್ಟಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಅಭಿ ಲೈನ್ ಮನೆಯಲ್ಲಿದ್ದ ಡೀಸೆಲ್ ತಂದು ಮಂಜು ಶರೀರದ ಮೇಲೆ ಚೆಲ್ಲಿ ಬೆಂಕಿಯಿಟ್ಟಿದ್ದಾನೆ. ಬೆಂಕಿಯಿAದ ಸೊಂಟದಿAದ ಮೇಲೆ ಭಾಗವು ಸಂಪೂರ್ಣ ಸುಟ್ಟು ಕರಕಲಾಗಿದೆ. ನಂತರದಲ್ಲಿ ಮೃತ ದೇಹವನ್ನು ಕಾಫಿ ಕಣದ ಸನಿಹ ಇದ್ದ ಹುಲ್ಲಿನ ಮೆದೆಯವರೆಗೆ ಎಳೆದು ತಂದಿದ್ದಾನೆ. ಯಾರಿಗೂ ಅರಿವಿಗೆ ಬಾರದ ರೀತಿಯಲ್ಲಿ ಮೃತ ದೇಹವನ್ನು ಹುಲ್ಲಿನ ಮೆದೆಯಲ್ಲಿ ಅಡಗಿಸಿಟ್ಟಿದ್ದಾನೆ. ಆ ಎಲ್ಲಾ ಕೃತ್ಯಗಳನ್ನು ಮುಗಿಸಿ ಮನೆಗೆ ಹಿಂದಿರುಗಿದ್ದಾನೆ. ಲೈನ್ ಮನೆಯಲ್ಲಿದ್ದ ಇತರರು ಮಂಜು ಎಲ್ಲಿ ಎಂದು ವಿಚಾರಿಸಿದಾಗ ಗೊತ್ತಿಲ್ಲ ಎಂದು ನಾಟಕವಾಡಿ ಮಲಗಿಕೊಂಡಿದ್ದಾನೆ. ಮನೆಯ ಮಂದಿ ರಾತ್ರಿ ವೇಳೆಯಲ್ಲಿ ಮಂಜುಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮುಂಜಾನೆ ತೋಟದ ಎಲ್ಲಾ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಮಂಜುನ ಸುಳಿವು ಸಿಗಲಿಲ್ಲ.

ಕೊನೆಯಲ್ಲಿ ತಾ.೮ರಂದು ತೋಟದ ಮಾಲೀಕರು ಮತ್ತು ಮೃತನ ತಂದೆ ಮಣಿ ಈರ್ವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಜು ಕಾಣೆಯಾಗಿರುವ ಕುರಿತು ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ

(ಮೊದಲ ಪುಟದಿಂದ) ಕೈಗೊಂಡು ಸ್ಥಳಕ್ಕೆ ತೆರಳಿ ಲೈನ್ ಮನೆಯಲ್ಲಿ ಎಲ್ಲರನ್ನು ತನಿಖೆಗೆ ಒಳಪಡಿಸುತ್ತಾರೆ. ಸಂಶಯದಿAದ ಚಂದನ್‌ನನ್ನೇ ತನಿಖೆಗೊಳಪಡಿಸಿ ಪೊಲೀಸ್ ಕ್ರಮದಲ್ಲಿ ವಿಚಾರಣೆ ಮಾಡಿದಾಗ, ಮಂಜುನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ಮಣಿ ನೀಡಿದ ದೂರಿನ ಮೇರೆಗೆ ಆರೋಪಿ ಚಂದನ್ ಮೇಲೆ ಕಲಂ. ೧೦೩(೧೦) ೨೩೮ ಬಿ.ಎನ್.ಎಸ್. ಕಾಯ್ದೆ ಅನ್ವಯ ಕೊಲೆ ಪ್ರಕರಣ ದಾಖಲು ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವೀರಾಜಪೇಟೆ ಉಪ ವಿಭಾಗ ಡಿ.ವೈಎಸ್ಪಿ ಅದೇಶದ ಮೇರೆಗೆ ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವೀರಾಜಪೇಟೆ ನಗರ ಠಾಣೆಯ ಪಿ.ಎಸ್.ಐ. ಹೆಚ್.ಎಸ್. ಪ್ರಮೋದ್, ವೀರಾಜಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಲತಾ, ಅಪರಾಧ ಪತ್ತೆ ದಳದ ಪಿ.ಎಸ್.ಐ. ವಾಣಿಶ್ರೀ ಹಾಗೂ ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಠಾಣೆಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಕಿಶೋರ್ ಕುಮಾರ್ ಶೆಟ್ಟಿ