ಭಾಗಮಂಡಲ/ ಕರಿಕೆ, ಜ. ೯: ಭಾಗಮಂಡಲ ವಲಯದ ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಜೋಡಿ ಕಡವೆ ಬೇಟೆ ಪ್ರಕರಣ ಒಂದು ಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಲಾಗಿದೆ.
ಸಮೀಪದ ಕುಂದಚೇರಿ ಗ್ರಾಮದ ಪೂವಲ ಮಾನಿ ಎಂಬಲ್ಲಿ ಕಡವೆಯ ಚರ್ಮ, ಬೋಟಿ, ಕಾಲು ಹಾಗೂ ಕೋವಿ ತೋಟ ಪತ್ತೆಯಾಗಿದ್ದು, ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ. ಕುಂದಚೇರಿ ಮತ್ತು ಕೋಪಟ್ಟಿ ನಡುವೆ ಅರಣ್ಯ ಪೈಸಾರಿ ಜಾಗದಲ್ಲಿ ಕಡವೆ ಹತ್ಯೆ ನಡೆದಿದ್ದು ಈ ಸಂಬAಧ ಅರಣ್ಯ ಇಲಾಖೆ ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಕೃತ್ಯದ ಬಗ್ಗೆ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಭಾಗಮಂಡಲ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.