ಮಡಿಕೇರಿ, ಜ. ೯: ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು ತಾ. ೧೧ ರಂದು ಸಂಸ್ಥೆಯ ೬೦ನೇ ವರ್ಷಾಚರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ತಿಳಿಸಿದ್ದಾರೆ.
೧೯೬೦ ರ ಜುಲೈ ೨೨ ರಂದು ಆರಂಭವಾದ ಪ್ರೌಢಶಾಲೆ ೬ ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ತಾ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ರೋಷನ್ ಅಪ್ಪಚ್ಚು, ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಸಿ.ಜಿ. ಕುಶಾಲಪ್ಪ, ಮಾಜಿ ಸಚಿವರಾದ ಎಂ.ಪಿ. ಅಪ್ಪಚ್ಚು ರಂಜನ್, ಬಿ.ಎ. ಜೀವಿಜಯ, ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಆರ್. ಬಾಬು, ಸಂಸ್ಥೆಯ ಮಹಾಪೋಷಕ ಗೌತಮ್ ಬಸಪ್ಪ, ಎಂ.ಜಿ. ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ರೋಟರಿ ಸಂಸ್ಥೆಯ ನಿಕಟಪೂರ್ವ ಗವರ್ನರ್ ಹೆಚ್.ಆರ್. ಕೇಶವ, ಜಿ.ಪಂ.ನ ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಬಿ.ಬಿ. ಪುಪ್ಪಾವತಿ, ಸಂಸ್ಥೆಯ ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಪ್ರೌಢಶಾಲಾ ಮುಖ್ಯಶಿಕ್ಷಕಿ ಕೆ.ಯು. ರೀಟಾ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಅಂದಾಜು ರೂ. ೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಭೋಜನ ಶಾಲೆಯ ಉದ್ಘಾಟನೆ ಮತ್ತು ವಜ್ರ ದೀವಿಗೆ ಸ್ಮರಣ ಸಂಚಿಕೆಯ ಲೋಕಾರ್ಪಣೆ ನಡೆಯಲಿದೆ.
ಚೆನ್ನಮ್ಮ ಎಜ್ಯುಕೇಷನ್ ಸೊಸೈಟಿಯ ವಜ್ರಮಹೋತ್ಸವದ ಅಂಗವಾಗಿ ತಾ. ೧೧ ರಂದು ಮಧ್ಯಾಹ್ನ ೨ ಗಂಟೆಯಿAದ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿತವಾಗಿದ್ದು, ಸಂಸ್ಥೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಬೋಪಣ್ಣ, ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಎಂ.ಜಿ. ಬೋಪಣ್ಣ ಉದ್ಘಾಟಿಸಲಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ. ನಾಣಿಯಪ್ಪ, ಕಾಫಿ ಬೆಳೆಗಾರರಾದ ಸಿ.ಪಿ. ಮುದ್ದಪ್ಪ, ಕೆ.ಎಸ್. ಮಂಜುನಾಥ್, ಹೆಚ್.ಎ.ಎಸ್. ಉತ್ತಯ್ಯ, ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ಬಿ.ಆರ್. ವಿಜಯಲಕ್ಷಿö್ಮ, ಪತ್ರಕರ್ತ ಅನಿಲ್ ಎಚ್.ಟಿ., ವಕೀಲ ಕೆ.ಎಸ್. ರತನ್ ತಮ್ಮಯ್ಯ, ಕರ್ನಲ್ ಪಾಸುರ ಮುತ್ತಪ್ಪ, ಕರ್ನಲ್ ಎಂ.ಜಿ. ತಿಮ್ಮಯ್ಯ, ಸಂಸ್ಥೆಯ ನಿವೃತ್ತ ಹಿರಿಯ ಕಚೇರಿ ಸಹಾಯಕಿ ಎಸ್.ಸಿ. ಮಾಲತಿ, ಲೆಕ್ಕಪರಿಶೋಧಕ ಫ್ರಾನ್ಸಿಸ್ ಪಿ.ಡಬ್ಲ್ಯು, ನಿವೃತ್ತ ಉಪನೋಂದಣಿಧಾಕಾರಿ ಕೆ.ಎಂ. ಭಾನುಮತಿ, ಮೈಸೂರಿನ ಉದ್ಯಮಿ ಬಿ.ವಿ. ವೆಂಕಪ್ಪ, ಶಾಲಾ ಸಮಿತಿಯ ಪೋಷಕ ಸದಸ್ಯ ಹೆಚ್.ಎಸ್. ಗಣೇಶ್, ಸವಿತ ಪಾಲ್ಗೊಳ್ಳಲಿದ್ದಾರೆ.
ಅಂದು ಸಂಜೆ ೫ ಗಂಟೆಯಿAದ ೭ ಗಂಟೆಯವರೆಗೆ ಹೆಸರಾಂತ ರಿಯಾಲಿಟಿ ಶೋ ಸರಿಗಮಪದ ಕಲಾವಿದರಾದ ಮಹೇಂದ್ರ, ಪ್ರಿಯಾ ಕುಂದಾಪುರ, ಶಶಿಕುಮಾರ್, ಸಿಂಚನ ಅವರಿಂದ ಗಾನ ವೈಭವ ಮತ್ತು ಬೆಂಗಳೂರಿನ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.