ವೀರಾಜಪೇಟೆ, ಜ. ೯: ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೃತ್ಯೋತ್ಸವ ಕಾರ್ಯ ಕ್ರಮದಲ್ಲಿ ವೀರಾಜಪೇಟೆಯ ಹನ್ಸ್ನಿ ಎನ್.ಆರ್. ಅವರಿಗೆ ಕರುನಾಡ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ೩ನೇ ತರಗತಿಯಲ್ಲಿ ಓದುತ್ತಿರುವ ಹನ್ಸ್ನಿ ಎನ್.ಆರ್. ಚಿತ್ರ ಹಾಗೂ ರಾಜೇಶ್ ಅವರ ಪುತ್ರಿ.
ಈ ಸಂದರ್ಭ ಶಶಿಧರ್ ಕೋಟೆ, ಡಾ. ಕೆಂಚನೂರು ಶಂಕರ್, ಡಾ. ಶ್ರೀಧರ್, ಕಾಂತಿ ಶೆಟ್ಟಿ, ತೋತಾಪುರಿ ಸೋಮಶೇಖರ ಗುರೂಜಿ, ಮಲ್ಲಿಕಾ ಕೇಶವ್, ವೆಂಕಟರಾಜು, ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ನ ಪ್ರೇಮಾಂಜಲಿ ಇದ್ದರು.