ಕೂಡಿಗೆ, ಜ. ೮: ಹಾಸನ ಹೆದ್ದಾರಿಯ ಕೂಡಿಗೆ ಸಮೀಪದಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿ ರುವ ಘಟನೆ ಸಂಭವಿಸಿದೆ. ಕೂಡಿಗೆ ಗ್ರಾಮ ನಿವಾಸಿ ಕೆ.ಟಿ. ಈಶ್ವರ (೭೦) ಎಂಬವರು ಹಾಲು ಉತ್ಪಾದಕರ ಸಂಘಕ್ಕೆ ಹಾಲನ್ನು ಹಾಕಲು ಹೋಗುವ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದಿದೆ. ಈಶ್ವರ ರಸ್ತೆಗೆ ಬಿದ್ದ ಪರಿಣಾಮ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದುದರಿಂದಾಗಿ ಕುಶಾಲನಗರ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಈಶ್ವರ ಸಾವನ್ನಪ್ಪಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.