ಮಡಿಕೇರಿ, ಜ. ೮: ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ನಡೆಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ನಗರದ ಗೌಳಿಬೀದಿ, ಉಕ್ಕುಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗೌಳಿಬೀದಿಯಲ್ಲಿ ಚೆರಿಯಮನೆ ಪೊನ್ನಪ್ಪ ಅವರು ಹಲವು ವರ್ಷಗಳ ಹಿಂದೆ ದಾನವಾಗಿ ನೀಡಿದ್ದ ಮೈದಾನ ಜಾಗದಲ್ಲಿ ನಗರಸಭೆಯ ೨.೫೦ ಲಕ್ಷ ರೂ. ಅನುದಾನದಲ್ಲಿ ವಾಕಿಂಗ್ ಪಾಥ್ ನಿರ್ಮಾಣಕ್ಕೆ ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಈ ಮೈದಾನದಲ್ಲಿ ವಾಕಿಂಗ್ ಪಾಥ್ ನಿರ್ಮಾಣದೊಂದಿಗೆ ಮೈದಾನದ ಮತ್ತಷ್ಟು ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನವನ್ನು ಒದಗಿಸುವುದಾಗಿ ಹೇಳಿದರು.

ವಸತಿಗೃಹಕ್ಕೆ ಭೂಮಿಪೂಜೆ

ಕರ್ಣಂಗೇರಿ ಗ್ರಾಮದ ಉಕ್ಕ್ಕುಡದಲ್ಲಿ ಸರ್ವೆ ನಂ. ೧೦/೨ರಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ೯೦ ಲಕ್ಷ ರೂ. ವೆಚ್ಚದಲ್ಲಿ ೧೨ ಮಂದಿ ಪೌರ ಕಾರ್ಮಿಕರಿಗೆ ನಿರ್ಮಿಸಲುದ್ದೇಶಿಸಿರುವ ವಸತಿಗೃಹ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

(ಮೊದಲ ಪುಟದಿಂದ) ನೆರವೇರಿಸಿದ ಶಾಸಕ ಮಂತರ್‌ಗೌಡ ಮಳೆಗಾಲದ ಒಳಗಾಗಿ ವಸತಿಗೃಹ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿ ಗಳಿಗೆ ಸೂಚಿಸಿದರು. ಇದೇ ಸಂದರ್ಭ ಆ ವ್ಯಾಪ್ತಿಯಲ್ಲಿ ಹಕ್ಕುಪತ್ರ ಇಲ್ಲದ ಕೆಲವರು ಹಕ್ಕುಪತ್ರ ಒದಗಿಸಿಕೊಡುವಂತೆ ಮನವಿ ಮಾಡಿದಾಗ, ತಹಶೀಲ್ದಾರ್ ಹಾಗೂ ಸಂಬAಧಿಸಿದ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದೆಂದು ಮಂತರ್‌ಗೌಡ ಭರವಸೆಯಿತ್ತರು. ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ದಲಿತ ಸಂಘಟನೆಗಳ ಪ್ರಮುಖರು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಶಾಸಕರು, ೨ ಎಕರೆ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸಂಬAಧ ನಗರಸಭೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಿದರಲ್ಲದೆ, ಸರ್ಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.

ರೂ. ೧೨ ಲಕ್ಷ ವೆಚ್ಚದಲ್ಲಿ ಪೌರಕಾರ್ಮಿಕರ ವಸತಿಗೃಹ ಜಾಗಕ್ಕೆ ಸಂಪರ್ಕ ಕಲ್ಪಿಸುವ ೨೧೮ ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿ, ೬.೭೫ ಲಕ್ಷ ವೆಚ್ಚದ ೧೨೦ ಮೀ. ಉಪರಸ್ತೆ ಕಾಮಗಾರಿಗಳಿಗೆ ಹಾಗೂ ಒಟ್ಟು ರೂ. ೧೫ ಲಕ್ಷ ವೆಚ್ಚದ ೨೦೦ ಮೀ. ಹಾಗೂ ೧೦೦ ಮೀ. ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳಿಗೂ ಶಾಸಕರು ಭೂಮಿಪೂಜೆ ನೆರವೇರಿಸಿದರು. ನಂತರ ಉಕ್ಕುಡದ ಅಂಬೇಡ್ಕರ್ ಭವನಕ್ಕೆ ಎಸ್‌ಸಿಪಿ ಯೋಜನೆಯಡಿ ೧೦೦ ಚೇರ್‌ಗಳನ್ನು ಮಂತರ್‌ಗೌಡ ಹಸ್ತಾಂತರಿಸಿದರು. ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಮಂತರ್‌ಗೌಡ ವಿತರಿಸಿದರು. ನಂತರ ಮೈತ್ರಿ ಹಾಲ್ ಬಳಿ ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು. ತಾಲೂಕು ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಗೆ ಮಂತರ್‌ಗೌಡ ಅವರು ಚಾಲನೆ ನೀಡಿ, ನಂತರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ರೂ.೩.೨೫ ಕೋಟಿ ವೆಚ್ಚದ ಕಾಮಗಾರಿಗಳು

ಗೌಳಿಬೀದಿ ಮೈದಾನದಲ್ಲಿ ವಾಕಿಂಗ್ ಪಾಥ್‌ಗೆ ರೂ. ೨.೫೦ ಲಕ್ಷ, ಪೌರ ಕಾರ್ಮಿಕರ ವಸತಿಗೃಹ, ಅಲ್ಲಿನ ರಸ್ತೆ, ಚರಂಡಿ ನಿರ್ಮಾಣ, ಅಂಬೇಡ್ಕರ್ ಸಮುದಾಯ ಭವನಗಳಿಗೆ ಚೇರ್ ವಿತರಣೆ ಸೇರಿದಂತೆ ಒಟ್ಟು ರೂ. ೧ ಕೋಟಿ ೨೪ ಲಕ್ಷದ ೭೫ ಸಾವಿರ ರೂ. ಹಾಗೂ ರೂ. ೧ ಕೋಟಿ ೯೮ ಲಕ್ಷ ವೆಚ್ಚದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಕಟ್ಟಡ ಸೇರಿದಂತೆ ಒಟ್ಟು ೩ ಕೋಟಿ ೨೫ ಲಕ್ಷದ ೨೫ ಸಾವಿರ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮಂತರ್‌ಗೌಡ ಚಾಲನೆ ನೀಡಿದರು.

ಈ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ತಹಶೀಲ್ದಾರ್ ಪ್ರವೀಣ್, ನಗರಸಭಾ ಆಯುಕ್ತ ರಮೇಶ್, ನಗರಸಭಾ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ, ಸಬಿತ, ಸದಾ ಮುದ್ದಪ್ಪ, ಜಗದೀಶ್, ಮುದ್ದುರಾಜ್, ಸತೀಶ್, ಯಾಕೂಬ್, ಚಂದ್ರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ಮುಡಾ ಸದಸ್ಯರಾದ ಚಂದ್ರಶೇಖರ್, ಮಿನಾಜ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಸದಸ್ಯರಾದ ಪೀಟರ್, ಪ್ರಕಾಶ್ ಆಚಾರ್ಯ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕಾಂಗ್ರೆಸ್ ವೃತ್ತಿಪರ ಘಟಕದ ಅಧ್ಯಕ್ಷ ಅಂಬೆಕಲ್ ನವೀನ್, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭುರೈ, ಮತ್ತಿತರರು ಹಾಜರಿದ್ದರು.