ಸಿದ್ದಾಪುರ, ನ. ೩೦: ಗ್ರಾಮ ಸಭೆಗೆ ಅಧಿಕಾರಿಗಳು ಗೈರಾದ ಹಿನ್ನೆಲೆ ಸಭೆಯನ್ನು ಮುಂದೂಡಬೇಕೆAದು ಒತ್ತಾಯಿಸಿ ಗ್ರಾಮಸ್ಥರು ಸಭೆಯಿಂದ ಹೊರ ನಡೆದು ಅಸಮಾಧಾನ ವ್ಯಕ್ತಪಡಿಸಿದರು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗ್ರೀಷ್ಮ ರಂಜು ಅಧ್ಯಕ್ಷತೆ ಹಾಗೂ ನೋಡೆಲ್ ಅಧಿಕಾರಿ ಡಾ.ರವಿ ಅವರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಯಬೇಕಾಗಿತ್ತು.
ನಿಯೋಜಿತ ನೋಡೆಲ್ ಅಧಿಕಾರಿ ರವಿ ಸಭೆಗೆ ಬಾರದೆ ಸಹಾಯಕ ಸಿಬ್ಬಂದಿಯನ್ನು ಕಳುಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕಿ ಕವಿತಾ ಅವರ ಸಮ್ಮುಖದಲ್ಲಿ ಸಭೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಆಗಮಿಸಿಲ್ಲ. ಗ್ರಾಮದಲ್ಲಿ ಗಂಭೀರ ಸಮಸ್ಯೆಗಳಿವೆ. ಮಾತುಕತೆ ಹಾಗೂ ಸಮಸ್ಯೆ ಬಗೆಹರಿಸಲು ನಿಮ್ಮಿಂದ ಸಾಧ್ಯವೆ? ಎಂದು ಪ್ರಶ್ನಿಸಿದರು.
ಗದ್ದೆ, ಕಾಫಿ, ಅಡಿಕೆ ಕೊಯ್ಲಿನ ಕೆಲಸದ ನಡುವೆಯೂ ಗ್ರಾಮದ ಸಮಸ್ಯೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ರಜೆ ಹಾಕಿ ಸಭೆಗೆ ಹಾಜರಾಗಿದ್ದೇವೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಹಾಗೂ ಪರಿಹಾರ ಕಾಣಲು ಅಧಿಕಾರಿಗಳೇ ಇಲ್ಲದ ಮೇಲೆ ಸಭೆ ಯಾಕೆ ನಡೆಸುತ್ತೀರಿ? ಸಭೆ ಮುಂದೂಡಿ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸಿದ ಗ್ರಾಮಸ್ಥರು ಸಭೆಯಿಂದ ಹೊರ ನಡೆದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗ್ರೀಷ್ಮ ರಂಜು ಸಭೆ ನಡೆಸಲು ಸಹಕಾರ ನೀಡಬೇಕೆಂದು ಮನವೊಲಿಸುವ ಪ್ರಯತ್ನವೂ ವಿಫಲಗೊಂಡಿತು. ಮಾಧ್ಯಮಗಳೊಂದಿಗೆ ಮಾತನಾಡಿದ ಅಧ್ಯಕ್ಷೆ ಗ್ರೀಷ್ಮ, ಗ್ರಾಮಸಭೆಗೆ ಬರಬೇಕೆಂದು ಸಂಬAಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಗೆ ಲಿಖಿತವಾಗಿ ಸೂಚಿಸಲಾಗಿತ್ತು. ಕೆಲವು ಅಧಿಕಾರಿಗಳು ಸಭೆಗೆ ಬಾರದಿರುವುದರಿಂದ ಗ್ರಾಮದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಸಭೆಯನ್ನು ಮುಂದೂಡಬೇಕೆAದು ಒತ್ತಾಯಿಸಿದ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಜಿನಿ ಕುಟ್ಟಪ್ಪ, ಸದಸ್ಯರುಗಳಾದ ಕಲ್ಪಿಸ್, ಜೀವನ್, ಶಾಂತಿ, ಲೋಕೇಶ್, ವನಿತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಶ್ರೀ, ಕಾರ್ಯದರ್ಶಿ ಧರಣಿ, ಗ್ರಾಮಸ್ಥರಾದ ರಾಬಿನ್, ಚಿನ್ನಪ್ಪ, ತಿಮ್ಮಯ್ಯ, ಅಜಿತ್, ಸುಬಯ್ಯ, ಸುರೇಶ್, ಗಣೇಶ್, ರಂಜು, ದಿನೇಶ್, ಉದಯ, ಪೆಮ್ಮಯ್ಯ, ತಮ್ಮಯ್ಯ, ಈಶ್ವರ ಕೃಷಿ ಇಲಾಖೆ ಅಧಿಕಾರಿ ಮೇಘ ಎಂ.ಆರ್, ಇಂಜಿನಿಯರ್ ಭಾರತಿ ಸೇರಿದಂತೆ ಇತರೆ ಇಲಾಖೆಯ ಹರ್ಷಿತ, ಮುತ್ತಪ್ಪ, ವೇಣು, ಮನೋಜ್, ಮಹೇಶ್, ಅರುಣ, ಪವಿತ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.